ಫ್ರೆಂಡ್ಸ್ ಬಡಗುಬೆಟ್ಟು : ಆಗಸ್ಟ್ 11ರಂದು “ಬಲೇ ಕೆಸರ್ಡ್ ಗೊಬ್ಬುಲೆ”
ಆಗಸ್ಟ್ 11ರಂದು ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ಬಡಗುಬೆಟ್ಟು ಕಂಬಳ ಗದ್ದೆಯ ಬಳಿ “ಬಲೇ ಕೆಸರ್ಡ್ ಗೊಬ್ಬುಲೆ” ಕಾರ್ಯಕ್ರಮವನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಿದರೆ, ಮುಖ್ಯ ಅತಿಥಿಗಳಾಗಿ ಸಂಸದೆ ಶೋಭಾ ಕರಂದಾಜ್ಲೆ, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಕಾಪು ಬಿಜೆಪಿ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಪ್ರಮುಖರಾದ ಉಪೇಂದ್ರ ನಾಯಕ್, ಅನಿಲ್ ಶೆಟ್ಟಿ ಓಂತಿಬೆಟ್ಟು, ರತನ್ ರಾಜ್, ಪ್ರಕಾಶ್ ನಾಯಕ್, ಸುಬ್ರಾಯ ಆಚಾರ್, ಜಯರಾಜ್ ಹೆಗ್ಡೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಫ್ರೆಂಡ್ಸ್ ಬಡಗುಬೆಟ್ಟು ಅಧ್ಯಕ್ಷ ಸಂದೀಪ್ ಶೆಟ್ಟಿ ಮತ್ತು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶುಭಕರ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರೋಪ ಸಮಾರಂಭ ದಕ್ಷಿಣ ಕನ್ನಡ ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶರ್ಮಿಳಾ ಮಾಧವ ಪೂಜಾರಿ, ಮಹೇಶ್ ಠಾಕೂರ್, ದಿನಕರ ಶೆಟ್ಟಿ ಹೆರ್ಗ, ಸುಮಿತ್ರಾ ನಾಯಕ್ , ಪ್ರವೀಣ್ ಪೂಜಾರಿ ಮತ್ತಿತರರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಶ್ಯಾಮಲಾ ಎಸ್ ಕುಂದರ್ ಮತ್ತು ಬಡಗುಬೆಟ್ಟು ಗ್ರಾಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಪುರುಷರಿಗೆ 100 ಮೀಟರ್ ಓಟ, ಕಾರ್ ಕಂಬಳ ಐದು ಕಾಲಿನ ಓಟ, ಉಪ್ಪು ಮುಡಿ, ಪಿರಮಿಡ್, ಹಗ್ಗಜಗ್ಗಾಟ, ತಪ್ಪಂಗಾಯಿ, ಹಾಳೆ ಬಂಡಿ, ಮಹಿಳೆಯರಿಗಾಗಿ 100 ಮೀಟರ್ ಓಟ, ಮಡಕೆ ಒಡೆಯುವುದು , ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಹಾಳೆ ಬಂಡಿ, ಮಡಕೆಗೆ ನೀರು ತುಂಬಿಸುವುದು ಮತ್ತು ಮಕ್ಕಳಿಗಾಗಿ 50 ಮೀಟರ್ ಓಟ, ರಿಲೇ ಓಟ , ಸೊಪ್ಪಿನಾಟ, ಹಾಳೆ ಬಂಡಿ, ಸಂಗೀತ ಕುರ್ಚಿ ಸಹಿತ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಫ್ರೆಂಡ್ಸ್ ಬಡಗುಬೆಟ್ಟು ಸಂಸ್ಥೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣೆ, ಕಣ್ಣಿನ ಚಿಕಿತ್ಸಾ ಶಿಬಿರ ಸಹಿತ ವಿವಿಧ ಕಾರ್ಯಕ್ರಮಗಳನ್ನು ಬಡಗುಬೆಟ್ಟು ಪರಿಸರದಲ್ಲಿ ಸಾರ್ವಜನಿಕರಿಗೆ ಹಮ್ಮಿಕೊಂಡು ಸಾರ್ವಜನಿಕರ ಪ್ರೀತಿಗೆ ಪಾತ್ರವಾಗಿದೆ.
“ಬಲೇ ಕೆಸರ್ಡ್ ಗೊಬ್ಬುಲೆ” ಎಂಬ ಗ್ರಾಮೀಣ ಕೂಟವನ್ನು ಪ್ರಚಾರಕ್ಕಾಗಿ ಮಾಡದೆ ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಮಾಡಲಾಗಿದೆ. ತಂತ್ರಜ್ಞಾನದ ಯುಗದಲ್ಲಿ ಜಾನಪದ ಕ್ರೀಡೆಗಳಿಂದ ದೂರ ಸರಿಯುತ್ತಿರುವ ಇಂದಿನ ಯುವಜನರಿಗೆ ಹಿಂದಿನ ಕಾಲದ ಗ್ರಾಮೀಣ ಕ್ರೀಡಾಕೂಟಗಳನ್ನು ನೆನಪಿಗೆ ತರಲು ಪ್ರಯತ್ನ ಮಾಡುತ್ತಿರುವುದಾಗಿ ಬಡಗುಬೆಟ್ಟು ಫ್ರೆಂಡ್ಸ್ ಬಡಗಬೆಟ್ಟು ಅಧ್ಯಕ್ಷ ಸಂದೀಪ್ ಶೆಟ್ಟಿ ಮತ್ತು ಗ್ರಾಮ ಸಮಿತಿ ಬಿಜೆಪಿ ಅಧ್ಯಕ್ಷರಾದ ಶುಭಕರ ಶೆಟ್ಟಿ ತಿಳಿಸಿದ್ದಾರೆ.