ಕ್ಷೇಮಧಾಮದಲ್ಲಿ ಮಾರ್ಚ್ 08 ರಂದು ಉಚಿತ ಮಹಿಳಾ ಆರೋಗ್ಯ ಶಿಬಿರ
ಬ್ರಹ್ಮಾವರ – “ಮಹಿಳೆಯರ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರಗಳು – ಉಚಿತ ವೈದ್ಯಕೀಯ ಶಿಬಿರ”* ಮಾರ್ಚ್ 08 ಅಂತರಾಷ್ಟ್ರ್ರೀಯ ಮಹಿಳಾ ದಿನಾಚರಣೆ 2020 – ಹೊಸ ಪೀಳಿಗೆಯ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳ ಅರಿವು ಎನ್ನುವ ಪರಿಕಲ್ಪನೆಯಲ್ಲಿ ಜಗತ್ತಿನಾದ್ಯಂತ ಆಚರಿಸಲ್ಪಡುತ್ತಿದೆ.ವೈಯಕ್ತಿಕ ಸುರಕ್ಷತೆ-ಭದ್ರತೆ, ಸಾಮಾಜಿಕ ಸ್ಥಾನ-ಮಾನ, ಸಾಮುದಾಯಿಕ ಗೌರವ-ಪ್ರಶಂಸೆ, ಜೀವನದ ಸಾಧನೆ-ಯಶಸ್ಸು…ಹೀಗೆ ಎಲ್ಲವನ್ನು ಪಡೆಯುವಲ್ಲಿ ಪರಿಪೂರ್ಣ ಅರೋಗ್ಯ ಮುಖ್ಯವಾಗುತ್ತದೆ.ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಕುತ್ಪಾಡಿ ಉಡುಪಿ ಇದರ ವೈದ್ಯಕೀಯ ಅಧೀಕ್ಷಕಿ ಡಾ.ಮಮತ ಕೆ.ವಿ ಉದ್ಘಾಟಿಸಲಿದ್ದು, ಅಂತರಾಷ್ಟ್ರೀಯ ಮಿಸೆಸ್ ವರ್ಲ್ಡ್ ಸೂಪರ್ ಮಾಡೆಲ್ ಡಾ.ಪ್ರಿಯದರ್ಶಿನಿ ರೈ ಡಿಸೋಜ, ಮಂಗಳೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆ ಬ್ರಹ್ಮಾವರ ಇವರು ಫಾರ್ಚುನ್ ಆರೋಗ್ಯ ಶಿಕ್ಷಣಗಳ ಸಂಸ್ಥೆ ಬ್ರಹ್ಮಾವರ, ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಉಡುಪಿ ಮತ್ತು ಶ್ರೇಷ್ಠವೇದ ಪ್ರತಿಷ್ಠಾನ (ರಿ) ಕುಂದಾಪುರ, ಜಂಟಿ ಸಹಯೋಗದಲ್ಲಿ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗಾಗಿ ಉಚಿತ ವೈದ್ಯಕೀಯ ಶಿಬಿರವನ್ನು ಮಾರ್ಚ್ 08 ಆದಿತ್ಯವಾರ ಕ್ಷೇಮಧಾಮ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಸದುಪಯೋಗ ಪಡೆಯಬೇಕೆಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ