ಸ್ವಾತಂತ್ರ್ಯೋತ್ಸವ ಅಂಗವಾಗಿ ಉಚಿತ ಸಮವಸ್ತ್ರ, ವಿದ್ಯಾರ್ಥಿ ವೇತನ ಮತ್ತು ವೈದ್ಯಕೀಯ ನೆರವು ವಿತರಣಾ ಸಮಾರಂಭ

ಉದ್ಯಾವರ: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ 73 ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಗಸ್ಟ್ 15 ರ ಗುರುವಾರ ಮದ್ಯಾಹ್ನ ಗಂಟೆ2.30 ಕ್ಕೆ ಹಪ್ಸಾ ಆಡಿಟೋರಿಯಂನಲ್ಲಿ ಯು. ಪಧ್ಮನಾಭ ಶೆಟ್ಟಿಗಾರ್, ಕೆ. ಸದಾನಂದ ಕಾಂಚನ್, ಟಿ.ವೈ ಶಾಬುದ್ಧೀನ್, ಐರೀನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ, ಮಂಜುನಾಥ ಉದ್ಯಾವರ ಸ್ಮಾರಕ ವೈದ್ಯಕೀಯ ನೆರವು ಮತ್ತು ಶ್ರೀ ಅಬ್ದುಲ್ ಜಲೀಲ್ ಸಾಹೇಬರ ಪ್ರಾಯೋಜಕತ್ವದಲ್ಲಿ ಉಚಿತ ಸಮವಸ್ತ್ರ ವಿತರಣಾ ಸಮಾರಂಭ ಜರಗಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕರೂ ದಾನಿಗಳಾದ ಶ್ರೀ ಅಬ್ದುಲ್ ಜಲೀಲ್ ಸಾಹೇಬ್‌ರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಆಳ್ವ, ಬ್ರಹ್ಮಾವರ ಎಸ್.ಎಂ.ಎಸ್.(ಸಿ.ಬಿ.ಎಸ್.ಸಿ.) ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅಭಿಲಾಷಾ ಎಸ್., ದಲಿತ ಚಿಂತಕರು ಮತ್ತು ಹೋರಾಟಗಾರರಾದ ಶ್ರೀ ಜಯನ್ ಮಲ್ಪೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಗಂಧಿ ಶೇಖರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿದ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ,ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀ ತಿಲಕ್ ರಾಜ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀ ಗಿರೀಶ್ ಗುಡ್ಡೆಯಂಗಡಿ ಮತ್ತು ಕೋಶಾಧಿಕಾರಿ ಶ್ರೀ ಸೋಮಶೇಖರ್ ಸುರತ್ಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!