ದೊಡ್ಡಣಗುಡ್ಡೆ ಡಾ ಎ.ವಿ ಬಾಳಿಗ ಆಸ್ಪತೆ ವತಿಯಿಂದ ಮಾ.30 ರಿಂದ ಉಚಿತ ಟೆಲಿಮೆಡಿಸಿನ್ ಸಲಹೆ
ಉಡುಪಿ: ದೊಡ್ಡಣಗುಡ್ಡೆ ಡಾ ಎವಿ ಬಾಳಿಗ ಸ್ಮಾರಕ ಆಸ್ಪತೆ ವತಿಯಿಂದ ಉಚಿತ ಟೆಲಿ ಮೆಡಿಸಿನ್ ಸಲಹೆಯನ್ನು ಮಾ.30 ರಿಂದ ಪ್ರಾರಂಭಿಸಲಿದ್ದಾರೆ. ರೋಗಿಗಳು 9242821815 ದೂರವಾಣಿಗೆ ಕರೆ ಮಾಡಿ, ತಮ್ಮ ಹೆಸರು, ವಯಸ್ಸು, ಮತ್ತು ಊರಿನ ವಿವರವನ್ನು ತಿಳಿಸಬೇಕು. ಹಳೆಯ ಗ್ರಾಹಕರು ಅವರ ಹಿಂದಿನ ಸಲಹೆ ಚೀಟಿಯನ್ನು ವಾಟ್ಸಪ್ ಮಾಡಬೇಕು. ತಮ್ಮ ವಾಯ್ಸ್ ಮೆಸೇಜ್ನಲ್ಲಿ ಅಥವಾ ಬರಹದಲ್ಲಿ ಟೆಲಿಮೆಡಿಸಿನ್ ಸೇವೆಯನ್ನು ಪಡೆಯಲು ಇಚ್ಛಿಸುತ್ತೇವೆ ಎಂದು ಬರೆದು ಅಥವಾ ಹೇಳಿ ತಮ್ಮ ಹೆಸರು ಮತ್ತು ವಯಸ್ಸು ತಿಳಿಸಬೇಕು .
ನಮ್ಮ ಆಸ್ಪತ್ರೆಯಿಂದ ಗ್ರಾಹಕರಿಗೆ ಕರೆ ಮಾಡುವ ಸಮಯವನ್ನು ತಿಳಿಸುತ್ತಾರೆ. ನಾವು ಗ್ರಾಹಕರಿಗೆ ದೂರವಾಣಿ ಮೂಲಕ ಸಲಹೆಯನ್ನು ನೀಡುತ್ತೇವೆ ನಮ್ಮ ಸಲಹೆಯ ನಂತರ ಗ್ರಾಹಕರಿಗೆ ಸಲಹಾ ಚೀಟಿಯನ್ನು ವಾಟ್ಸಪ್ ಮೂಲಕ ನೀಡಲಾಗುವುದು. ನಾವು ತಿಳಿಸಿದ ಔಷಧವನ್ನು ಅವರ ಹತ್ತಿರದ ಬೌಷಧಿ ಅಂಗಡಿಯಿಂದ ಖರೀದಿಸ ಬಹುದು. ಈ ಸೇವೆ ಕೇಂದ್ರ ಸರ್ಕಾರ ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿರುವ ಟೆಲಿಮೆಡಿಸಿನ್ ಸೇವೆಯ ನಡವಳಿಗಳನ್ನು ನೋಡಿಕೊಂಡು ಕರೋನಾ ಎಮರ್ಜೆನ್ಸಿ ಮುಗಿಯುವವರೆಗೆ ಆಸ್ಪತ್ರೆ ಕೊಡುತ್ತಿರುವ ವಿಶಿಷ್ಟ ಉಚಿತ ಸೇವೆ ಎಂದು ಡಾ ಎವಿ ಬಾಳಿಗ ಸ್ಮಾರಕ ಆಸ್ಪತೆ
ಮನೋವೈದ್ಯ ಹಾಗೂ ವೈದ್ಯಕೀಯ ನಿರ್ದೇಶಕರಾದ ಡಾ.ಪಿ.ವಿ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.