ಫಾ. ಮಹೇಶ್ ಪ್ರಕರಣದ ತನಿಖಾಧಿಕಾರಿ ಬದಲಾವಣೆ

ಉಡುಪಿ: ಶಿರ್ವದ ಡಾನ್ ಬಾಸ್ಕೋ ಸಿ.ಬಿ.ಎಸ್.ಸಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿರ್ವ ಸಾವುದ್ ಅಮ್ಮನವರ ಇಗರ್ಜಿಯ ಸಹಾಯಕ ಗುರುಗಳು ಫಾ. ಮಹೇಶ್ ಡಿಸೋಜ (36 ವರ್ಷ) ಅ.11 ರಂದು ಶಿರ್ವ ಡಾನ್ ಬಾಸ್ಕೋ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಫ್ಯಾನ್‌ಗೆ ನೈಲಾನ್ ಹಗ್ಗ
ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣದಲ್ಲಿ ಹಲವಾರು ಸಂಶಯಗಳಿದ್ದು ಇದನ್ನು ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಆಗ್ರಹಿಸಿ ಕಳೆದ ಮೂರು ದಿನ ಅವರ ಸಾವಿರಾರು ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು.

ಆದ್ದರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನೀಶಾ ಜೆಮ್ಸ್ ಈ ಪ್ರಕರಣದ ತನಿಖೆಯನ್ನು ದಕ್ಷ ಅಧಿಕಾರಿಯೆಂದು ಹೆಸರುವಾಸಿಯಾಗಿರುವ ಕಾಪು ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದಲ್ಲಿ, ಸಮಗ್ರವಾಗಿ ಮತ್ತು ಅತೀ ಶೀಘೃವಾಗಿ ನಡೆಸುವ ಸಲುವಾಗಿ ಮುಂದಿನ ತನಿಖಾಧಿಕಾರಿಯಾಗಿ ಕಾಪು ವೃತ್ತ ನಿರೀಕ್ಷಕರಾದ ಮಹೇಶ್ ಪ್ರಸಾದ್ ರವರನ್ನು ನಿಯೋಜಿಸಲಾಗಿದೆಂದು ಉಡುಪಿ ಪೊಲೀಸ್ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!