ಫಾ.ಮಹೇಶ್ ಆತ್ಮಹತ್ಯೆ: ಡೇವಿಡ್ ಡಿಸೋಜಾ ಬಂಧನವಾಗಿಲ್ಲ

ಉಡುಪಿ: ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರುಗಳು ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣದಲ್ಲಿ ಯಾರನ್ನು ಕೂಡ ಬಂಧಿಸಲಾಗಿಲ್ಲವೆಂದು ತನಿಖಾಧಿಕಾರಿ, ಶಿರ್ವ ಎಸ್‌ಐ ಅಬ್ದುಲ್ ಖಾದರ್ “ಉಡುಪಿ ಟೈಮ್ಸ್”ಗೆ ಇಂದು ತಿಳಿಸಿದರು.

ಅ. 11 ರಂದು ಫಾ.ಮಹೇಶ್ ಡಿಸೋಜಾ ತಮ್ಮ ಪ್ರಿನ್ಸಿಪಾಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಪ್ರಕರಣದಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಕೈವಾಡವಿದೆಂದು ವಾಟ್ಸ್ ಆಪ್ ನಲ್ಲಿ ಸುದ್ಧಿ ಹರಡುತ್ತಿದೆ. ಈ ಬಗ್ಗೆ ತನಿಖಾಧಿಕಾರಿ ಖಾದರ್ ಮಾತನಾಡಿ ಈ ಆತ್ಮಹತ್ಯೆ ಪ್ರಕರಣದ ಬಗ್ಗೆ ಯಾರು ಕೂಡ ಸಂಶಯ ವ್ಯಕ್ತಪಡಿಸಿಲ್ಲ ಆದರೂ ಪೊಲೀಸ್ ತನಿಖೆ ನಡೆಯುವುದು ಸಹಜ ಪ್ರಕ್ರಿಯೆ. ಅದರಂತೆ ಶಾಲಾ ಭದ್ರತಾ ಸಿಬ್ಬಂದಿಯಿಂದ ಹಿಡಿದು ಚರ್ಚ್‌ನ ಹಿರಿಯ ಧರ್ಮಗುರುಗಳವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ. ಹಾಗೂ ಫಾ.ಮಹೇಶ್ ಅವರ ಮೊಬೈಲ್‌ನ ಕರೆಗಳನ್ನು ಪರೀಶಿಲಿಸಿದಾಗ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಸಹಿತ ಹಲವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.


ಯಾವುದೋ ವೈಯಕ್ತಿಕ ವಿಚಾರಕ್ಕೆ ಮನನೊಂದು ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದು , ಅವರು ಅ.11 ರಂದು ರಾತ್ರಿ8.45ಕ್ಕೆ ಚರ್ಚ್ ನಿಂದ ಪ್ರಿನ್ಸಿಪಾಲ್ ಕೊಠಡಿಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಫಾ. ಮಹೇಶ್ ಉಪಯೋಗಿಸುತ್ತಿದ್ದ 2 ಮೊಬೈಲ್ ವಶಕ್ಕೆ ಪಡೆದು ಅದನ್ನು ಬೆಂಗಳೂರಿನ (ಎಫ್‌ಎಸ್‌ಎಲ್) ಲ್ಯಾಬ್‌ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಕಳುಹಿಸಲಾಗಿದೆ, ಇದರ ವರದಿ ಇನ್ನಷ್ಟೆ ನಮ್ಮ ಕೈ ಸೇರಬೇಕು ಎಂದು ಖಾದರ್ ಹೇಳಿದರು.

ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ನನ್ನ ರಾಜಕೀಯಾ ಏಳಿಗೆ ಸಹಿಸದ ಕೆಲವೊಂದು ವ್ಯಕ್ತಿಗಳು ನನ್ನ ತೇಜೋವಧೆ ಮಾಡುತ್ತಿದ್ದು ,ಈ ಸುಳ್ಳು ಸುದ್ಧಿ ವಾಟ್ಸ್ ಆಪ್ ಮತ್ತು ಇತರ ಸೋಶಿಯಲ್ ಮಾಧ್ಯಮದಲ್ಲಿ ಹರಡಿಸುವವರ ವಿರುದ್ಧ ನಾನು ಶಿರ್ವ ಪೊಲೀಸ್ ಠಾಣೆ ಮತ್ತು ಸೈಬರ್ ಠಾಣೆಗೆ ದೂರು ನೀಡುವುದಾಗಿ “ಉಡುಪಿ ಟೈಮ್ಸ್” ಗೆ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ತಿಳಿಸಿದರು.


ಈ ಪ್ರಕರಣದಲ್ಲಿ ನನ್ನ ಕೈವಾಡವಿದ್ದರೆ ಪೊಲೀಸರು ಯಾಕೆ ಬಂಧಿಸಿಲ್ಲ , ಅವರ ಆತ್ಮಹತ್ಯೆ ವಿಷಯ ತಿಳಿದು ನಾನು ಅಂದು ರಾತ್ರಿ 9.30ಕ್ಕೆ ಚಚ್ ಗೆ ಹೋಗಿದ್ದೆ . ಅವರು ಆತ್ಮಹತ್ಯೆ ಮಾಡುವ ಮುನ್ನ 10 ಕ್ಕೂ ಹೆಚ್ಚು ಜನರಿಗೆ ಮೊಬೈಲ್ ಸಂದೇಶ ಕಳುಹಿಸಿದ್ದಾರೆ. ಫಾ.ಮಹೇಶ್ ಅವರು ನಮ್ಮ ಕುಟುಂಬದ ಫ್ಯಾಮಿಲಿ ಫ್ರೆಂಡ್ ಆಗಿದ್ದವವರು ಆದ್ದರಿಂದ ನಾವು ಆತ್ಮೀಯವಾಗಿದ್ದೇವು ಎಂದರು. ಪ್ರಕರಣದ ತನಿಖೆ ದಿಕ್ಕು ತಪ್ಪಿಸಲು ಕೆಲವೊಂದು ವ್ಯಕ್ತಿಗಳು ನನ್ನ ವಿರುದ್ಧ ಸುಳ್ಳು ಸುದ್ಧಿಗಳನ್ನು ಹರಡಿಸುತ್ತಿದ್ದಾರೆಂದು ಈ ಸಂದರ್ಭ ಹೇಳಿದರು.

Leave a Reply

Your email address will not be published. Required fields are marked *

error: Content is protected !!