ಅಕ್ರಮ ಗೋಸಾಗಾಟದಲ್ಲಿ ಭಾಗಿಯಾದ ನಾಲ್ವರು ಪೊಲೀಸರ ಅಮಾನತು: ಎಸ್ಪಿ

ಕೋಟ: ಅಕ್ರಮ ಜಾನುವಾರು ಸಾಗಾಟ ಜಾಲದಲ್ಲಿ ಭಾಗಿಯಾದ ನಾಲ್ವರು ಪೊಲೀಸರನ್ನು ಉಡುಪಿ ಜಿಲ್ಲಾ ಎಸ್ಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಜುಲೈ ೧೨ ರಂದು ಕುಂದಾಪುರದಿಂದ ಕಾಸರಗೋಡುವಿಗೆ ಅಕ್ರಮವಾಗಿ ಜಾನುವಾರು ಸಾಗಾಟದ ವಾಹನವನ್ನು  ಕೋಟ ಎಸ್‌ಐ ನಿತ್ಯಾನಂದ ಗೌಡ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು, ೨೦ ಜಾನುವಾರುಗಳನ್ನು ಕಳವು ಮಾಡಿಕೊಂಡು ಕಾಸರಗೋಡು ಕಸಾಯಿಖಾನೆಗೆ ಸಾಗಿಸುತ್ತಿದ್ದ ,  ಈ ಅಕ್ರಮ ಗೋ ಸಾಗಾಟಕ್ಕೆ ಬೆಂಗಾವಲು ವಾಹನವಾಗಿ ಕಾರೊಂದನ್ನು ಸಾಸ್ತಾನದಲ್ಲಿ ವಶಪಡಿಸಿಕೊಂಡಿದ್ದರು.

ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಈ ಅಕ್ರಮ ಸಾಗಾಟಕ್ಕೆ ಪೊಲೀಸರೇ ಸಹಕರ ನೀಡುತ್ತಿದ್ದರು ಎಂಬ ಸ್ಪೋಟಕ ಮಾಹಿತಿ ಹೊರಬಂದಿತ್ತು. ಇದರಲ್ಲಿ ಭಾಗಿಯಾದ ಮಲ್ಪೆ ಕರಾವಳಿ ಕಾವಲು ಪಡೆಯ ಸಂತೋಷ್ ಶೆಟ್ಟಿ(37) ಹಾಗೂ ಮಂಕಿ ಪೊಲೀಸ್ ಠಾಣೆಯ ವಿನೋದ್ ಗೌಡ(37) ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ತೀವೃಗೊಳಿಸುತ್ತಿದ್ದಂತೆ ಮತ್ತೇ ನಾಲ್ವರು ಪೊಲೀಸರು ಈ ಅಕ್ರಮ ಗೋ ಸಾಗಾಟದಲ್ಲಿ ಭಾಗಿಯಾಗಿದ್ದರು ಎಂದು ಮಾಹಿತಿ ಹೊರ ಬೀಳುತ್ತಿದ್ದಂತೆ ನಾಲ್ವರು ಪೊಲೀಸರು ತಲೆಮರಿಸಿಕೊಂಡಿದ್ದಾರೆ.

ಕೋಟ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ , ಉಡುಪಿ ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ಎಎಸ್‌ಐ ಬಾಲಸುಬ್ರಮಣ್ಯ , ಹೆಡ್ ಕಾನ್‌ಸ್ಟೇಬಲ್ ಪ್ರಶಾಂತ್, ಕಾನ್‌ಸ್ಟೇಬಲ್ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ತಲೆಮರಿಸಿಕೊಂಡ ನಾಲ್ವರನ್ನು ಬಂಧಿಸಲು ಪೊಲೀಸರು ಬಲೆಬೀಸಿದ್ದಾರೆ.

ಉಡುಪಿ ಜಿಲ್ಲೆಯ ನಾಲ್ವರು ಪೊಲೀಸರು ಮತ್ತು ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪೊಲೀಸರು ಭಾಗಿಯಾಗಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಪೊಲೀಸರೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ರವರು ಇದನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರೇ ಶಾಮಿಲಾಗಿರುವುದು ಬೇಸರದ ಸಂಗತಿ, ಈ ಪ್ರಕರಣ ಹೊರಬರಲು ಕೂಡ ಪೊಲೀಸ್ ಸಿಬ್ಬಂದಿಗಳೇ ಕಾರಣ . ಈ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನಿಷ್ಪಕ್ಷಪತವಾಗಿ ತನಿಖೆ ನಡೆಸಿ , ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸುವುದಾಗಿ ಮಾಧ್ಯಮದವರಿಗೆ ಎಸ್ಪಿ ತಿಳಿಸಿದರು.

ಈ ಕೃತ್ಯದಲ್ಲಿ ಭಾಗಿಯಾಗಿದ್ದ ಪೊಲೀಸರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೇ ಅವರ ವಿರುದ್ಧ ಕೇಸು ದಾಖಲಿಸಿ ಕ್ರಮ ಜರಗಿಸಿರುವುದಕ್ಕೆ ಕೋಟ ಎಸ್‌ಐ ನಿತ್ಯಾನಂದ ಗೌಡ ಅವರಿಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!