ಉಡುಪಿಯಲ್ಲಿ ನಾಲ್ಕು ಕೊರೊನಾ ಶಂಕಿತ ಪ್ರಕರಣ ದಾಖಲು
ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತೆ ಇವತ್ತು ನಾಲ್ಕು ಹೊಸ ಶಂಕಿತ ಪ್ರಕರಣಗಳು ದಾಖಲಾಗಿದೆ. ಮಣಿಪಾಲ ಕೆಎಂಸಿಗೆ ಇಬ್ಬರು ಕೊರೊನಾ ಲಕ್ಷಣವಿರುವ ರೋಗಿಗಳು ದಾಖಲಾಗಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಕುಂದಾಪುರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಬ್ಬೊಬ್ಬ ರೋಗಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ದಾಖಲಾದ ನಾಲ್ವರಲ್ಲಿ ಶೀತ, ಕೆಮ್ಮು, ಕಫದ ಲಕ್ಷಣಗಳು ಕಂಡುಬಂದಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ಕೊಟ್ಟಿದ್ದಾರೆ.
ಉಡುಪಿ- ಉಡುಪಿಯಲ್ಲಿ ಇಂದು ನಾಲ್ಕು ಕೊರೊನಾ ಶಂಕಿತ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಸ್ಪತ್ರೆಗೆ , ಕುಂದಾಪುರ ಸರಕಾರಿ ಆಸ್ಪತ್ರೆ ತಲಾ ಒಂದೊಂದು ರೋಗಿ ದಾಖಲಾಗಿದ್ದರೆ, ಮಣಿಪಾಲ ಕೆ ಎಂಸಿ ಗೆ ಇಬ್ಬರು ರೋಗಿಗಳ ದಾಖಲಾಗಿದ್ದರೆ.
ಶಿವಮೊಗ್ಗದ ಪ್ರಯೋಗಾಲಯದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಒಟ್ಟು 12 ರೋಗಿಗಳ ವೈದ್ಯಕೀಯ ವರದಿ ಬರಲು ಬಾಕಿಯಿದೆ. ನಾಲ್ವರ ಗಂಟಲ ಸ್ರಾವ ಹಾಸನಕ್ಕೆ ಈಗಾಗಲೇ ರವಾನೆಯಾಗಿದೆ. ಶಂಕಿತರಲ್ಲಿ ಹೆಚ್ಚಿನವರು ಬೆಹರೈನ್, ಸೌದಿ ಮತ್ತು ಆಸ್ಟ್ರೇಲಿಯಾದಿಂದ ಬಂದವರು ,ವಿದೇಶದಿಂದ ಉಡುಪಿ ಜಿಲ್ಲೆಗೆ ಈವರೆಗೆ ಬಂದವರ ಸಂಖ್ಯೆ 364 , ಸುಮಾರು 286 ಜನರಿಗೆ 28 ದಿನ ನಿಗಾ ವಹಿಸಲು ಸೂಚನೆ ನೀಡಲಾಗಿದ್ದೆ ಎಂಬುದಾಗಿ ಉಡುಪಿ ಡಿಎಚ್ ಒ ಸುಧೀರ್ ಚಂದ್ರ ಸೂಡ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿದೇಶದಿಂದ ವಾಪಸ್ಸಾದವರು ಆರೋಗ್ಯ ನಿರ್ಲಕ್ಷ್ಯ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.