ಬಾಂಬರ್ ಆದಿತ್ಯಾ ರಾವ್ ನ ಲಾಕರ್ ನಲ್ಲಿ ದೊರಕಿದ್ದು ಸೈನೈಡ್ ಎಂದು ದೃಢ!
ಉಡುಪಿ: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯಾ ರಾವ್ ನ ಬ್ಯಾಂಕ್ ಲಾಕರ್‌ನಲ್ಲಿ ಪತ್ತೆಯಾದ ವಸ್ತು ಸೈನೇಡ್ ಎಂಬುದು ಈಗ ದೃಢಪಟ್ಟಿದೆ.
ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ಪ್ರಾಥಮಿಕ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಹೀಗಾಗಿ ಬಾಂಬರ್ ಆದಿತ್ಯ ನನ್ನು ಸೈನೇಡ್ ಕುರಿತು ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೈನೇಡ್ ಆತನಿಗೆ ಎಲ್ಲಿಂದ ದೊರಕಿತ್ತು? ಆತನೇ ವಸ್ತುಗಳನ್ನು ಬಳಸಿ ಸೈನೇಡ್ ತಯಾರಿಸಿದ್ದ? , ಅದನ್ನು ಬ್ಯಾಂಕ್ ಲಾಕರ್‌ನಲ್ಲಿ ಏಕೆ ಇಟ್ಟ ಎಂಬ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಉಡುಪಿ ಕರ್ನಾಟಕ ಬ್ಯಾಂಕ್ ಕುಂಜಿಬೆಟ್ಟು ಶಾಖೆಗೆ ಆದಿತ್ಯ ರಾವ್ ನನ್ನು ಶನಿವಾರ ಕರೆತರಲಾಗಿತ್ತು. ಲಾಕರ್ ನಲ್ಲಿ ದೊರಕಿದ್ದ ಪುಡಿಯನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.