ಅಮೂಲ್ಯನಿಂದ ಪ್ರೇರಿತನಾಗಿ ದೇಶವಿರೋಧಿ ಘೋಷಣೆ ಕೂಗಿದ ಮಾಜಿ ಶಿಕ್ಷಕ

ಉಡುಪಿ ಜಿಲ್ಲೆಯ ಕುಂದಾಪುರದ  ತಾಲೂಕು ಪಂಚಾಯತ್ ಕಚೇರಿ ಒಳಗೆ ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾ ನಿರಂತರವಾಗಿ ಘೋಷಣೆ ಕೂಗಿದ ಘಟನೆ ಇವತ್ತು ನಡೆದಿದೆ. ಘೋಷಣೆ ಕೂಗಿದ ವ್ಯಕ್ತಿಯನ್ನು ಕೋಡಿ ನಿವಾಸಿಯಾಗಿರುವ ರಾಘವೇಂದ್ರ ಗಾಣಿಗ(43) ಎಂದು ಗುರುತಿಸಲಾಗಿದೆ.

ಈತನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇವತ್ತು ಬೆಳಿಗ್ಗೆ ಸುಮಾರು 9.40ರ ಸುಮಾರಿಗೆ ಆರೋಪಿ ರಾಘವೇಂದ್ರ ಗಾಣಿಗ ಕುಂದಾಪುರದ ತಾಲೂಕು ಪಂಚಾಯತ್ ಕಚೇರಿ ಬಂದಿದ್ದಾನೆ.ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಪಾಕಿಸ್ತಾನ ಜಿಂದಾಬಾದ್ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕಾರಿಡಾರ್ ಉದ್ದಕ್ಕೂ ಕೂಗುತ್ತಾ ಸಾಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ.

ಬಳಿಕ ಆರೋಪಿ ರಾಘವೇಂದ್ರ ಗಾಣಿಗ ಕಾರಿಡಾರ್ನಿಂದ ತಾಲೂಕು ಪಂಚಾಯತ್ ಕಚೇರಿ ಒಳಗೆ ಪ್ರವೇಶಿಸಿದ್ದು, ಅಲ್ಲಿಯೂ ನಿರಂತರವಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದಾನೆ. ಈ ಸಂದರ್ಭ ಮಾಹಿತಿ ಪಡೆದ ಕುಂದಾಪುರ ತಹಸೀಲ್ದಾರ್ ಲಿಖಿತವಾಗಿ ಆರೋಪಿಯ ವಿರುದ್ದ ದೂರು ನೀಡಿದ್ದು, ಪೊಲೀಸರು ಆರೋಪಿ ರಾಘವೇಂದ್ರ ಗಾಣಿಗನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಆರೋಪಿ ರಾಘವೇಂದ್ರ ಗಾಣಿಗ ವಿವಾಹಿತನಾಗಿದ್ದು, ಒಂದು ಮಗುವಿದೆ. ವಿದ್ಯಾವಂತನಾಗಿರುವ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಕುಂದಾಪುರದ ಖಾಸಗೀ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ. ಸದ್ಯ ಪತ್ನಿ ಹಾಗೂ ಮಗುವನ್ನು ತ್ಯಜಿಸಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದಾನೆ.

ಆರೋಪಿ ಮೇಲೆ ದೇಶದ್ರೋಹದ ಮೊಕ್ಕದ್ದಮೆ ದಾಖಲು ಮಾಡಿದ್ದೇವೆ.ರಾಘವೇಂದ್ರನ ಮೇಲೆ ಸೆಕ್ಷನ್ 124a ಅಡಿ ಕೇಸು ದಾಖಲಾಗಿದೆ.ಆತನ ಮಾನಸಿಕ ಆರೋಗ್ಯ ಬಗ್ಗೆ ಇನ್ನೂ ಗೊತ್ತಾಗಿಲ್ಲ.ಮೆಡಿಕಲ್ ರಿಪೋರ್ಟ್ ಬಂದ ಬಳಿಕ ಮಾಹಿತಿ ನೀಡುತ್ತೇವೆ.ರಾಘವೇಂದ್ರನಿಗೆ ಮಾತಿನ ಮೇಲೆ ಹಿಡಿತವಿಲ್ಲ.ಪದೇಪದೆ ಮಾತು ಬದಲಾಯಿಸುತ್ತಿದ್ದಾನೆ.ತನಿಖೆ ಮುಂದುವರೆಸಿದ್ದೇವೆ ಅಂತ ಉಡುಪಿ ಎಎಸ್ ಪಿ ಕುಮಾರಚಂದ್ರ ಹೇಳಿಕೆ ನೀಡಿದ್ದಾರೆ


ಅಮೂಲ್ಯನಿಂದ ಪ್ರೇರಿತನಾದ – ಈತ ದಿನ ಟಿವಿ ನೋಡುವ ಗೀಳು ಬೆಳೆಸಿಕೊಂಡಿದ್ದ . ಟಿವಿಯಲ್ಲಿ ಬರುತ್ತಿದ್ದ ಅಮೂಲ್ಯನ ದೇಶಿ ದ್ರೋಹಿ ಹೇಳಿಕೆಯಿಂದ ಪ್ರೇರಣೆ ಪಡೆದಿದ್ದ ಎನ್ನಲಾಗಿದ್ದು. ಬೆಳಿಗ್ಗೆ ಕುಂದಾಪುರ ಮಾತಾ ಹಾಸ್ಪಿಟಲ್ ಗೆ ಮಾನಸಿಕ ಚಿಕಿತ್ಸೆ ಕರೆತಂದಾಗ ತಪ್ಪಿಸಿಕೊಂಡು ಈ ಕೃತ್ಯ ಎಸಗಿದ್ದ ಎನ್ನಲಾಗಿದೆ. ಸದ್ಯ ಪೋಲೀಸರ ಆತಿಥ್ಯದಲ್ಲಿದ್ದಾನೆ.

1 thought on “ಅಮೂಲ್ಯನಿಂದ ಪ್ರೇರಿತನಾಗಿ ದೇಶವಿರೋಧಿ ಘೋಷಣೆ ಕೂಗಿದ ಮಾಜಿ ಶಿಕ್ಷಕ

  1. ಈ ದೇಶಕ್ಕೆ ಏನಾಗಿದೆ? ಭಯಾನಕ ದುರಂತವೊಂದರ ಮುನ್ಸೂಚನೆಯಂತಿದೆಯಲ್ಲಾ! ಎಲ್ಲಾ ಚಿತ್ರವಿಚಿತ್ರವಾಗಿ ಆಡುತ್ತಿದ್ದಾರೆ!

Leave a Reply

Your email address will not be published. Required fields are marked *

error: Content is protected !!