
ಉಡುಪಿ – ಅಷ್ಟ ಮಠಗಳು ದುಃಖದ ಕಡಲಿನಲ್ಲಿ ಮುಳುಗಿದೆ. ಸದಾ ಲವಲವಿಕೆಯಿಂದ ಇದ್ದ ಶ್ರೀಗಳು ಇದೀಗ ನಿಶ್ಚಲ ವಾಗಿ ಮಲಗಿದ್ದಾರೆ. ವಿಧಿ ವಿಧಾನ ಮಠದಲ್ಲಿ ಆರಂಭಗೊಂಡಿದ್ದು ಮಧ್ಯಾಹ್ನ 1 ಗಂಟೆಯವರೆಗೆ ಉಡುಪಿ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಭಕ್ತರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿದೆ.













ರಥಬೀದಿಯಲ್ಲಿ ಭಕ್ತರು ತಮ್ಮ ಪ್ರೀತಿಯ ಗುರುವಿಗೆ ಅಶ್ರುತರ್ಪಣ ನೀಡುತ್ತಿದ್ದಾರೆ. ಶ್ರೀಗಳ ಕೊನೆಯ ಆಸೆಯಂತೆ ಬೆಂಗಳೂರಿನ ವಿದ್ಯಾ ಪೀಠದಲ್ಲಿ ಕೊನೆಯ ಕಾರ್ಯಗಳು ಹಾಗು ಬೃಂದಾವನ ನಿರ್ಮಿಸಲಾಗುವುದು.