ಫ್ಲೈವುಡ್ ಮಿಲ್ ಬೆಂಕಿಗಾಹುತಿ

ಬಂಟ್ವಾಳ: ಇಲ್ಲಿಗೆ ಸಮೀಪದ ಬ್ರಹ್ಮರ ಕೂಟ್ಲುನಲ್ಲಿರುವ ಪ್ಲೈವುಡ್ ಮಿಲ್ ವೊಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂ.ಮವಲ್ಯದ ಸೊತ್ತುಗಳು ಭಸ್ಮವಾದ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶಾಲೆಯ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೂಟ್ಲುವಿನ ಕೆ.ಹಮೀದ್ ಎಂಬವರ ಮಾಲಕತ್ವದ ಕೋಸ್ಟಲ್ ವುಡ್ ಪ್ರೋಡಕ್ಸ್ ಮಿಲ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.


ಘಟನೆಯ ವಿವರ ;
ಮುಂಜಾನೆ 4 ಗಂಟೆಯ ಹೊತ್ತಿಗೆ ಮಿಲ್ ನ ಒಳಭಾಗದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಈ ವೇಳೆ ಇಲ್ಲಿನ ವಾಚ್ ಮ್ಯಾನ್ ಮಾಲಕರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ‌. ಅರ್ಧ ತಾಸಿನ ಬಳಿಕ ಬೆಂಕಿ ಮಿಲ್ ಒಳಭಾಗವಿಡೀ ವ್ಯಾಪಿಸಿದೆ‌. ಒಟ್ಟು ನಾಲ್ಕು ಘಟಕದ ಅಗ್ನಿಶಾಮಕ ದಳವು ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಪ್ಲೈವುಡ್ ತಯಾರಿಸಲು ಒಣಗಿಸಿದ ಕೋರ್, ಸ್ಪೇಸ್, ಸೀಟ್ ಗಳು ಸುಟ್ಟು ಕರಕಲಾಗಿವೆ. ಅದಲ್ಲದೆ, ಯಂತ್ರೋಪಕರಣಗಳು, ವಿದ್ಯುತ್ ಪರಿಕರಗಳು, ಮಿಲ್ ನ ಮೇಲ್ಭಾಗದ ಶೀಟ್ ಗಳು ಸುಟ್ಟು ಹೋಗಿವೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬಂಟ್ವಾಳದ 2 ಅಗ್ನಿಶಾಮಕ ವಾಹನ, ಕದ್ರಿ, ಪಾಂಡೇಶ್ವರ ಅಗ್ನಿ ಶಾಮಕ ವಾಹನ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ ಎಂದು ಶಂಕಿಸಲಾಗಿದ್ದು, ಪ್ಲೈವುಡ್ ತಯಾರಿಸುವ ಕಚ್ಛಾ ಸಾಮಗ್ರಿಗಳು ಬೆಂಕಿ ಸುಟ್ಟಿವೆ. ನಷ್ಟದ ಇನ್ನಷ್ಟೇ ಅಂದಾಜು ಮಾಡಬೇಕಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!