ಅಂಬಲಪಾಡಿ ದೇಗುಲಕ್ಕೆ ಹೂವಿನ ವಿಶೇಷ ಅಲಂಕಾರ

ಉಡುಪಿ : ಇಂದು ಶುಕ್ರವಾರ, ಸಾಮಾನ್ಯವಾಗಿ ಉಡುಪಿಯ ಜನ ಶುಕ್ರವಾರದಂದು ಮಹಾಕಾಳಿ ದೇವಸ್ಥಾನಕ್ಕೆ  ಭೇಟಿ ನೀಡುತ್ತಾರೆ. ಆದರೆ ಇಂದು ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ಅಚ್ಚರಿ ಕಾದಿತ್ತು. ಎತ್ತ ನೋಡಿದರತ್ತ ಕಣ್ಣಿಗೆ ಮುದ ನೀಡುವ ಹೂವಿನ ಅಲಂಕಾರ ಒಂದೆಡೆಯಾದ್ರೆ ಇನ್ನೊಂದೆಡಡೆ ಮೂಗಿಗೆ ಬಡಿಯುವ ಹೂವಿನ ಘಮಘಮ ಪರಿಮಳ ಒಟ್ಟಾರೆ ಹೂವಿನದ್ದೇ ಜಾತ್ರೆ. ಉಡುಪಿಯಲ್ಲಿ ಪ್ರಸಿದ್ಧವಾಗಿರುವ ಅಂಬಲಪಾಡಿಯ ಜನಾರ್ಧನ ಮಹಾಕಾಳಿ ದೇವಸ್ಥಾನ ಇಂದು ನೂರಾರು ಬಗೆಯ ಹೂವುಗಳಿಂದ ಶೃಂಗಾರಗೊಂಡು ಕಂಗೊಳಿಸುತ್ತಿತ್ತು.

ಕಳೆದ 5 ವರ್ಷಗಳಿಂದ ಚಿಕ್ಕಾಬಳ್ಳಾಪುರ ಮೂಲದ ರಮೇಶ್ ಬಾಬು ಯಾನೆ ಮಹಾಕಾಳಿ ಬಾಬು ಅವರು ಪ್ರತಿವರ್ಷ ಏಕದಶಿಯಂದು ವಿಶೇಷ  ಹೂವಿನ ಅಲಂಕಾರದ ಸೇವೆಯನ್ನು ದೇವರಿಗೆ ಅರ್ಪಿಸುತ್ತಾ ಬಂದಿದ್ದಾರೆ. ಚಿಕ್ಕಬಳ್ಳಾಪುರದಿಂದ ನಿನ್ನೆ 200 ಮಂದಿ ಭಕ್ತರು ಆಗಮಿಸಿದ್ದು, 100 ಮಂದಿಯ ತಂಡ ನಿನ್ನೆ ರಾತ್ರಿ 11 ಗಂಟೆಯಿಂದ ಆರಂಭವಾದ ಹೂವಿನ ಅಲಂಕಾರ ಇಂದು ಬೆಳಿಗ್ಗೆ 8 ಗಂಟೆಗೆ ಪೂರ್ಣಗೊಂಡಿತು.

ಟ್ರಾವೆಲ್ಸ್ ಉದ್ಯಮಿ ಮತ್ತು ನಗರ ಸಭೆ ಸದಸ್ಯರಾದ ರಮೇಶ್ ಬಾಬು ಯಾನೆ ಮಹಾಕಾಳಿ ಬಾಬು ಸಾಮಾನ್ಯ ಭಕ್ತರಂತೆ 30 ವರ್ಷದಿಂದ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದು, ರಾಜಕೀಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನ ದೊರೆತ ಸಲುವಾಗಿ ಕಳೆದ 5 ವರ್ಷದಿಂದ ಏಕದಶಿಯಂದು ಹೂವಿನ ಅಲಂಕಾರ ಮಾಡಿ ದೇವರಿಗೆ ಸೇವೆ ಸಲ್ಲಿಸುತ್ತಿದ್ದಾರೆ.

ಪರಊರಿನ ಮಹಾಕಾಳಿಯ ಭಕ್ತರು ನೀಡುವ ಸೇವೆ ಜನಮನಗೆದ್ದಿದೆ. ಚಿಕ್ಕಬಳ್ಳಾಪುರದ ಭಕ್ತವೃಂದದವರು ಅಂಬಲಪಾಡಿಗೆ ಬಂದು ಲಕ್ಷಾಂತರ ರುಪಾಯಿಯ ಹೂವಿನ ಅಲಂಕಾರ ಮಾಡಿ ದೇವಸ್ಥಾನದ ಸೌಂದರ್‍ಯ ಹೆಚ್ಚಿಸಿದ್ದಾರೆ.

ದೇವರ ವಿಗ್ರಹಕ್ಕೆ ಹೂವಿನ ಅಂಲಂಕಾರ ಮಾಡುವುದು ಸಾಮಾನ್ಯ ಇನ್ನೂ ವಿಶೇಷ ದಿನದಂದೂ ಅಲ್ಲಿ ಹೂವಿನ ಅಲಂಕಾರ ನೋಡಬಹುದು ಆದ್ರೆ ಅಂಬಲಪಾಡಿಯಲ್ಲಿ ಎತ್ತ ನೋಡಿದರತ್ತ ಗುಡಿ ಗೋಪುರ, ಗೋಡೆ ಒಂದಿಂಚೂ ಬಿಡದೆ ಹೂವಿನ ಅಲಂಕಾರ ಮಾಡಲಾಗಿತ್ತು. ಹೂದೋಟದಂತಾಗಿರುವ ದೇವಸ್ಥಾನದವನ್ನು ನೋಡುವುದೇ ಕಣ್ಣುಗಳಿಗೆ ಹಬ್ಬ.

ಅಲಂಕಾರಕ್ಕಾಗಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ವಿಶೇಷ ಹೂವುಗಳನ್ನು ತರಿಸಲಾಗಿತ್ತು. ಫೈನಾಪಲ್ ಜೋಳ, ಕ್ಯಾಪ್ಸಿಕಂ, ಸೇವಂತಿಗೆ, ವಿವಿಧ ಬಣ್ಣಗಳ ಗುಲಾಬಿ, ಚೆಂಡು ಹೂವು, ವಿವಿಧ ಜಾತಿಯ ಅಲಂಕಾರಿಕ ಹೂವುಗಳಿಂದ ಶೃಂಗಾರಗೊಂಡ ದೇವಸ್ಥಾನವನ್ನು ನೋಡುವುದಕ್ಕೆ ಹಚ್ಚಿದ ಭಕ್ತರ ಸಂಖ್ಯೆ.

Leave a Reply

Your email address will not be published. Required fields are marked *

error: Content is protected !!