ನೆರೆ ಪರಿಹಾರ: 3ಸಾವಿರ ಕೋಟಿ ಪರಿಹಾರ ಬಿಡುಗಡೆ ಸಾಧ್ಯತೆ
ಉಡುಪಿ: ಕೇಂದ್ರ ಸರಕಾರ 1200 ಕೋಟಿ ನೆರೆ ಪರಿಹಾರ ಬಿಡುಗಡೆ ಆಗಿದೆ. ಎನ್ ಡಿಆರ್ ಎಫ್ ಯೋಜನೆಯಡಿ ಮಂಜೂರಾಗಿದೆ. ಎರಡನೇ ಹಂತದ ಮೂರು ಸಾವಿರ ಕೋಟಿ ಪರಿಹಾರ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಮಟ್ಟಾರು ಹಿಂದಿನ ಯುಪಿಎ ಸರ್ಕಾರ ನಿಯಾವಳಿ ಜಾರಿಗೊಳಿಸಿದ್ದರಿಂದ ಎನ್ ಡಿಆರ್ ಎಫ್ ನಿಯಮಾವಳಿ ಬದಲಾಯಿಸಲು ಚಿಂತನೆ ನಡೆಸಿದ್ದರೆ. ಹೆಚ್ಚು ಹಾನಿ ಆದ ಕಡೆಗಳಲ್ಲಿ ವಿತರಣೆ ಮಾಡಲಾಗುವುದು. ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ನಾಲ್ಕು ಲಕ್ಷ ಸಂತ್ರಸ್ತರಿಗೆ ನೂರು ಕೋಟಿ ಹಣ ಮಂಜೂರು ಮಾಡಲಾಗಿದೆ. ಸಿಎಂ ಮನೆಯನ್ನು ಕಳೆದುಕೊಂಡವರಿಗೆ ಐದು ಲಕ್ಷ, ಮನೆ ಇಲ್ಲದವರಿಗೆ ತಾತ್ಕಾಲಿಕ ಬಾಡಿಗೆ ಆಶ್ರಯ ಪಡೆಯಲು ನೆರವು ಕಲ್ಪಿಸಿದೆ.ಜಿಲ್ಲೆಗೆ ಪ್ರಾಕೃತಿಕ ವಿಕೋಪದಡಿ 25 ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಭತ್ತದ ಬೆಳೆ ಹಾನಿ ಆಗಿದೆ. ಎಕರೆ ಮೂರರಿಂದ ನಾಲ್ಕು ಸಾವಿರ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು ಒತ್ತಾಯ. ಮರಳು ಸಮಸ್ಯೆ4ರಿಂದ 5 ಲಕ್ಷ ಮರಳು ಬೇಕು. 158 ಜನ ಸಾಂಪ್ರದಾಯಿಕ ಮರಳು ದಿಬ್ಬ ತೆರವುಗೊಳಿಸಲು ಅನುಮತಿ ನೀಡಲಾಗಿದೆ. ದರ ಕಡಿಮೆ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡಲಾಗುವುದು. ನಾನ್ ಸಿಆರ್ ಝಡ್ ನಲ್ಲಿ ಕುಂದಾಪುರ ಭಾಗದಲ್ಲಿ ಅ.16 ರಿಂದ ಮರಳು ತೆಗೆಯಲಾಗುವುದು. ಏಳು ಜನರ ಸಮಿತಿಯಲ್ಲಿ ನಿರ್ಧರಿಸಲಾಗಿದೆ ತಿಳಿಸಿದರು.
ಮೂರು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಮರಳು ಸಮಸ್ಯೆ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದರು .
ಯಶ್ಪಾಲ್ ಸುವರ್ಣ, ಪ್ರಭಾಕರ ಪೂಜಾರಿ, ರವಿ ಅಮೀನ್, ಸಂಧ್ಯಾ ರಮೇಶ್, ಶಿವಕುಮಾರ್ ಗೋಷ್ಠಿಯಲ್ಲಿದ್ದರು.