ಉದ್ಯಾವರದಲ್ಲಿ ಮತ್ತೆ ಫಿಶ್‌ಮಿಲ್‌ಗೆ ಅನುಮತಿ ?

ಉಡುಪಿ: ನಗರದ ಹೊರ ವಲಯದ ಉದ್ಯಾವರದಲ್ಲಿ ಮತ್ತೆ ಕೈಗಾರಿಕಾ ವಲಯಕ್ಕೆ ನೀರಾಪೇಕ್ಷಣಾ ಪತ್ರ! ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕಳೆದ ಕೆಲವು ವರ್ಷಗಳ ಕಾಲ ಉದ್ಯಾವರದಲ್ಲಿ ಕಾರ್ಯಚರಿಸುತ್ತಿದ್ದ ಫಿಶ್‌ಮಿಲ್‌ನಿಂದ ಉದ್ಯಾವರದ ಸುತ್ತಮುತ್ತಲ ಪರಿಸರ ಹಾನಿಯಿಂದಾಗಿ ಇಲ್ಲಿನ ನಿವಾಸಿಗಳ ಬದುಕು ಹೈರಣಾಗಿತ್ತು. ಈಗ ಮತ್ತೆ ಕೈಗಾರಿಕಾ ವಲಯ ಸ್ಥಾಪನೆಗೆ ಎನ್‌ಒಸಿ ದೊರಕಿದೆ.

ಉದ್ಯಾವರ ವ್ಯಾಪ್ತಿಯಲ್ಲಿ ಮತ್ತೆ ಕೈಗಾರಿಕೆ ಸ್ಥಾಪನೆಗೆ ಎನ್‌ಓಸಿ ನೀಡುತ್ತಿರುವುದು ಸ್ಥಳೀಯರ ಮತ್ತು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶ ಪತ್ರ ಇದೀಗ ಉದ್ಯಾವರ ಗ್ರಾಮಸ್ಥರ ನಿದ್ದೆಗೆಡಿಸಿದೆ ಸುಮಾರು 3 ಪುಟಗಳ ವಿಸ್ತೃತ ಆದೇಶ ಪತ್ರದಲ್ಲಿ ಕೈಗಾರಿಕಾ ವಲಯ ಬದಲಾವಣೆಗೆ ಆದೇಶಿಸಿಸಲಾಗಿದೆ.

ಈ ಹಿಂದೆ ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಫಿಶ್‌ಮಿಲ್‌ನಿಂದಾಗಿ ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿತ್ತು. ಫಿಶ್‌ಮಿಲ್‌ನ ತ್ಯಾಜ್ಯ ನೀರು ಶುದ್ಧಿಕರೀಸದೆ ಇಲ್ಲಿನ ಪಾಪನಾಶಿನ ನದಿಗೆ ಬೀಡಲಾಗುತಿತ್ತು. ಇದರಿಂದಾಗಿ ನದಿಯಲ್ಲಿ ಮೀನುಗಾರಿಕೆಗೆ, ಕೃಷಿಗೆ ಉಪಯೋಗಕ್ಕೆ ನೀರು ಉಪಯೋಗಿಸದಂತಾಗಿದೆ. ಮಾತ್ರವಲ್ಲದೆ ಈ ಪರಿಸರದ ಹಲವಾರು ಬಾವಿಗಳ ನೀರು ಕಲುಷಿತಗೊಂಡಿತ್ತು.


ಅಷ್ಟಲ್ಲದೆ, ಫ್ಯಾಕ್ಟರಿಗಳಿಗೆ ಮೀನು ತುಂಬಿಸಿ ಕೊಂಡು ಹೋಗುತ್ತಿದ್ದ ವಾಹನಗಳಿಂದ ನಿರಂತರ ರಸ್ತೆ ಮೇಲೆ ತ್ಯಾಜ್ಯಯುಕ್ತ ನೀರು ಚೆಲ್ಲಿಕೊಂಡು ಹೋಗುತಿದ್ದರು. ಇದರಿಂದ ದಿನ ನಿತ್ಯವೆಂಬಂತೆ ವಾಹನಗಳ ಅಪಘಾತದ ಸರಮಾಲೆಯಾಗುತಿತ್ತು. ಫಿಶ್‌ಮಿಲ್‌ನ ತ್ಯಾಜ್ಯ ನೀರು ಮಳೆ ನೀರು ಹರಿಯುವ ಚರಂಡಿಯಲ್ಲಿ ತುಂಬಿಕೊಂಡ ಪರಿಣಾಮ ಸಾಂಕ್ರಾಮಿಕ ರೋಗ ಹರಡಿತ್ತು. ಇದೇ ವಿಚಾರವಾಗಿ ಸ್ಥಳೀಯರು ಫಿಶ್‌ಮಿಲ್ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಫಿಶ್‌ಮಿಲ್ ಮುಚ್ಚಿಸಿ ಗ್ರಾಮಸ್ಥರನ್ನು ರಕ್ಷಿಸಬೇಕು ಎನ್ನುವ ನಾಗರೀಕ ಹಿತರಕ್ಷಣಾ ಸಮಿತಿ ರಚಿಸಿ ಹೋರಾಟಕ್ಕೆ ಇಳಿದ ಸ್ಥಳೀಯರು ಗ್ರಾಮ ಪಂಚಾಯತ್‌ಗೆ ಸಮಸ್ಯೆಗಳನ್ನು ಮನವರಿಕೆ ಮಾಡಿಸಿದ್ದರು.

\
ಅಲ್ಲದೇ ಗ್ರಾಮ ಪಂಚಾಯತ್ ಕೂಡ ಸರ್ವಾನುಮತದಿಂದ ಫಿಶ್‌ಮಿಲ್‌ಗೆ ನೀಡಿದ್ದ ಎನ್‌ಓಸಿ ರದ್ದು ಮಾಡಿ ಮುಂದೆ ಯಾವುದೇ ಕೈಗಾರಿಕೆಗಳಿಗೆ ಉದ್ಯಾವರದಲ್ಲಿ ಅವಕಾಶ ನೀಡುವುದಿಲ್ಲ ಎನ್ನುವ ನಿರ್ಧಾರ ಕೈಗೊಂಡಿತ್ತು. ಆದರೆ ಸದ್ಯ ಗ್ರಾಮ ಪಂಚಾಯತ್ ವಿರೋಧದ ನಡುವೆ ಮತ್ತೆ ಉದ್ಯಾವರದಲ್ಲಿ ಕೈಗಾರಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ. ಇದರಿಂದ ಉದ್ಯಾವರ ಜನತೆ ಆಕ್ರೋಶಿತರಾಗಿದ್ದು, ಯಾವುದೇ ಕಾರಣಕ್ಕೂ ಉದ್ಯಾವರದಲ್ಲಿ ಕೈಗಾರಿಕಾ ವಲಯಕ್ಕೆ ಅನುಮತಿ ನೀಡಿ ಇಲ್ಲಿನ ಪರಿಸರ ನಾಶ ಮಾಡಲು ಬಿಡಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಇಲ್ಲಿನ ಪರಿಸರ ಹೋರಾಟಗಾರರು.

Leave a Reply

Your email address will not be published. Required fields are marked *

error: Content is protected !!