ಮೀನುಗಾರರ ಸಾಲ ಮನ್ನಾ : ಯಡಿಯೂರಪ್ಪ ಅವರಿಗೆ ಸಮುದಾಯದ ಮೇಲಿನ ಕಾಳಜಿಗೆ ಸಾಕ್ಷಿ – ಯಶ್ಪಾಲ್ ಸುವರ್ಣ  

ಉಡುಪಿ: ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಮೀನುಗಾರರ ಸಾಲಮನ್ನದ ನಿರ್ಣಯವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಕೈಗೊಂಡಿರುವುದು  ಮೀನುಗಾರರ ಮೇಲೆ ಅವರಿಗಿರುವ ಕಾಳಜಿಯನ್ನು ವ್ಯಕ್ತಪಡಿಸುತ್ತದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ ಸುವರ್ಣ ತಿಳಿಸಿದ್ದಾರೆ.

ಕರಾವಳಿಯ ಮೀನುಗಾರ ಸಮುದಾಯದ ವ್ಯಕ್ತಿಗಳೇ ಮಂತ್ರಿ ಸ್ಥಾನವನ್ನು ಅಲಂಕರಿಸಿ ಅಧಿಕಾರವನ್ನು ಅನುಭವಿಸಿದ್ದರೂ ಮೀನುಗಾರರಿಗೆ ಅವರು ನೀಡಿದ ಕೊಡುಗೆ ದೊಡ್ಡ ಶೂನ್ಯ. ಕನಿಷ್ಠಪಕ್ಷ ಮೀನುಗಾರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನವೂ ಅವರಿಂದ ನಡೆದಿರಲಿಲ್ಲ. ಆದರೆ ಮಾನ್ಯ ಮುಖ್ಯಮಂತ್ರಿಗಳು ಕಳೆದ ಬಾರಿ ಚುನಾವಣಾ ಸಮಯದಲ್ಲಿ ಕರಾವಳಿಗರಿಗೆ ಕೊಟ್ಟ ಮಾತನ್ನು ನೆನಪಿಟ್ಟುಕೊಂಡು ಈಗ ಪೂರೈಸಿದ್ದಾರೆ ಅವರಿಗೆ ನಾಡಿನ ಸಮಸ್ತ ಮೀನುಗಾರ ಬಂಧುಗಳ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ.
ಕರಾವಳಿಯ ಬಹುತೇಕ ಮೀನುಗಾರರು ಸ್ಥಳೀಯ ಸಹಕಾರಿ ಸಂಘಗಳಲ್ಲಿ ಸಂಘಗಳಲ್ಲಿ ಸಾಲ ಮಾಡಿರುತ್ತಾರೆ ಸುಮಾರು 70ಕ್ಕೂ ಅಧಿಕ ಸಹಕಾರಿ ಸಂಘಗಳು ಮೀನುಗಾರರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿವೆ ಇದೀಗ ಕೇವಲ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ವಷ್ಟೇ ಮನ್ನಾ ಮಾತ್ರ ಘೋಷಣೆಯಾಗಿದ್ದು,ಮಾನ್ಯ ಮುಖ್ಯಮಂತ್ರಿಗಳು ಸಹಕಾರಿ ಸಂಘಗಳ ಸಾಲವನ್ನೂ ಕೂಡ ಮನ್ನಾ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ.

ಮೀನುಗಾರಿಕೆ ಮತ್ತು ಬಂದರು ಇಲಾಖೆ ಒಂದಕ್ಕೊಂದು ಪೂರಕ ವಾಗಿರುವ ಕಾರಣ ಈ ಎರಡೂ ಇಲಾಖೆಗಳನ್ನು ಒಂದೇ ವ್ಯಕ್ತಿಗೆ ನೀಡಬೇಕು ಆಗ ಮೀನುಗಾರಿಕಾ ಇಲಾಖೆಯ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತವೆ. ಈಗ ಹಲವಾರು ಯೋಜನೆಗಳು ನೆನೆಗುದಿಗೆ ಬೀಳಲು ಈ ಎರಡು ಇಲಾಖೆಗಳ ನಡುವಿನ ಹೊಂದಾಣಿಕೆಯ ಕೊರತೆ ಪ್ರಮುಖ ಕಾರಣವಾಗಿದೆ. ಈ ತಪ್ಪನ್ನು ಮಾನ್ಯ ಮುಖ್ಯಮಂತ್ರಿಗಳು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಮೀನುಗಾರರು ಹಲವು ದಶಕಗಳಿಂದ ತಮ್ಮ ಹಲವಾರು ಸಮಸ್ಯೆಗಳ ಬಗ್ಗೆ ಮನವಿಪತ್ರಗಳನ್ನು ಕೊಡುತ್ತಾ ಬಂದಿದ್ದರೂ ಅದರಲ್ಲಿ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ ಮಾನ್ಯ ಯಡಿಯೂರಪ್ಪ ಅವರು ಮೀನುಗಾರರ ಮೇಲೆ ಇರಿಸಿರುವ ಕಾಳಜಿಯನ್ನು ಕಂಡಾಗ ಈ ಬಾರಿ ನಮ್ಮ ಆಶಯಗಳು ಈಡೇರ ಬಹುದು ಎಂಬ ಆಶಾಭಾವನೆ ಮೂಡಿದೆ. ಕೂಡಲೆ ನಮ್ಮ ಮೀನುಗಾರರ ನಿಯೋಗ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಗ್ರ ಮೀನುಗಾರಿಕಾ ನೀತಿಯ ಬಗ್ಗೆ ಚರ್ಚಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!