ಉಡುಪಿಯಲ್ಲಿ ಮೀನು, ಮಾಂಸ ಮಾರಾಟ ನಿರ್ಬಂದಿಸಿಲ್ಲ: ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯಲ್ಲಿ ಮೀನು ಹಿಡಿಯುವುದು ಹಾಗೂ ಮಾರಾಟ ಮಾಡುವುದನ್ನು
ನಿರ್ಬಂದಿಸಿಲ್ಲ, ಅದರೆ ಗುಂಪು ಗುಂಪಾಗಿ ಮೀನುಗಾರಿಕೆ ಮಾಡುವುದು ಹಾಗೂ ಮಾರಾಟ ಮಾಡುವುದಕ್ಕೆ ನಿರ್ಭಂದವಿದೆ,ಆದರೆ ಸಾಂಪ್ರದಾಯಿಕ ದೋಣಿಗಳಲ್ಲಿ ಮೀನುಗಾರಿಕೆ ಮಾಡಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮೀನು ,ಕೋಳಿ , ಮಾಂಸ ಮಾರಾಟ ಮಾಡಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಠಪಡಿಸಿದ್ದಾರೆ.
ಅವರು ಗುರುವಾರ, ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ರೈತರ ಬೆಳಗಳಿಗೆ ಸಹ ಯಾವುದೇ ತೊಂದರೆಯಾಗದಂತೆ ಸಮರ್ಪಕ ರೀತಿಯಲ್ಲಿ ಸಾಗಾಟ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ, ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ,ಆಹಾರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಂಡಿದೆ, ಪಡಿತರ ವಿತರಣೆ ನಡೆಯುತ್ತಿದ್ದು ಯಾವುದೇ ಗೊಂದಲಗಳಿಗೆ ಆಸ್ಪದ ನೀಡದಂತೆ ಸಮರ್ಪಕ ರೀತಿಯಲ್ಲಿ ಪಡಿತರ ವಿತರಿಸಲಾಗುತ್ತಿದೆ, ಪಡಿತರ ದಾಸ್ತಾನು ಕೊರತೆಯಿಲ್ಲ ಎಂದು ಜಿ.ಜಗದೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಕ್ವಾರಟೈಂನ್ ಮಾಡಿರುವವರ ಊಟ ಮತ್ತು ವಸತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಿಲ್ಲಾಡಳಿತದ ಮೂಲಕ ಮಾಡುತ್ತಿದ್ದು, ಅವರಿಗೆ ಪೌಷ್ಠಿಕ ಆಹಾರ ಮತ್ತು ಹಣ್ಣುಗಳನ್ನು ಒದಗಿಸಲಾಗುತ್ತಿದೆ, ಜಿಲ್ಲೆಯಲ್ಲಿ ಇನ್ನು 4
ದಿನದಲ್ಲಿ ಪ್ರಸ್ತುತ ಕ್ವಾರಟೈಂನ್ ನಲ್ಲಿರುವರ ಅವಧಿ ಮುಗಿಯಲಿದೆ, ನಂತರ 14 ದಿನ ಅವರ ಬಗ್ಗೆ ನಿಗಾ ವಹಿಸಲಾಗುವುದು, ಹೋ ಕ್ವಾರಠೈಂನ್ ಉಲ್ಲಂಘಿಸುವವರ ವಿರುದ್ದ 2 ವರ್ಷಗಳ ಜೈಲು ವಾಸದ ಶಿಕ್ಷೆ ವಿಧಿಸಬಹುದಾಗಿದ್ದು, ಅವರಿಂದ ತೊಂದರೆಗೊಳಗಾದ ನಾಗರೀಕರ ಚಿಕಿತ್ಸಾ ವೆಚ್ಚವನ್ನು , ಕ್ವಾರಂಟೈನ್ ಉಲ್ಲಂಘಿಸಿದ ವ್ಯಕ್ತಿಯಿಂದಲೇ ವಸೂಲಿ
ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.