ಕಾರ್ಕಳ ತಾಲೂಕಿನಲ್ಲಿ ಪ್ರಥಮ ಸಿಐಟಿಯು ಸಮ್ಮೇಳನ

ಕಾರ್ಕಳ: ಕಾರ್ಮಿಕ ಸಂಘಟನೆಯಾಗಿರು ಸಿಐಟಿಯು ಇದರ ಪ್ರಥಮ ಸಮ್ಮೇಳನವು ಕಾರ್ಕಳದಲ್ಲಿ ನಡೆಯಿತು. ರಾಜೀವ ಗಾಂಧಿ ಕಿಸಾನ್ ಸಭಾ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಸಮ್ಮೇಳನವನ್ನು ಸಿಐಟಿಯುನ ಉಡುಪಿ ಜಿಲ್ಲಾಧ್ಯಕ್ಷ ಪಿ ವಿಶ್ವನಾಥ ರೈ ಉದ್ಣಾಟಿಸಿ ಮಾತನಾಡಿ, ದೇಶದಲ್ಲಿನ ಕಾರ್ಮಿಕ ಚಳುವಳಿಗೆ 100 ವರ್ಷಗಳು ತುಂಬಿದ್ದು,ಕಾರ್ಮಿಕರ ಹಿತಾಸಕ್ತಿ ಕಾಪಾಡುತ್ತಿರುವ ಸಿಐಟಿಯುಗೆ 50 ವರ್ಷ ತುಂಬಿದ್ದು ಈ ಹಿನ್ನಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿ ಐಕ್ಯತೆಯನ್ನು ಗಟ್ಟಿಗೊಳಿಸಿ ಹೋರಾಟ ನಡೆಸಬೇಕಿದೆ ಎಂದರು.

ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ೪೪ ಕಾರ್ಮಿಕ ಕಾನೂನುಗಳನ್ನು ರದ್ದುಪಡಿಸಿ ೪ ಲೇಬರ್ ಕೋಡ್ ಮಾಡಲು ಹೊರಟ್ಟಿದ್ದು ಇದು ಕಾರ್ಮಿಕರ ಭವಿಷ್ಯಕ್ಕೆ ಮಾರಕವಾಗುವ ಸಾಧ್ಯತೆಯಿದ್ದ ಹಿನ್ನಲೆಯಲ್ಲಿ ಸಂಘಟನೆಗಳ ತೀವೃ ಹೋರಾಟದ ನಂತರ ಸ್ಥಗಿತಗೊಳಿಸಿ ಇದೀಗ ಮತ್ತೆ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಲೋಬರ್ ಕೋಡ್ ಅನುಷ್ಠಾನಕ್ಕೆ ಮುಂದಾಗಿದ್ದು ಇದರ ವಿರುದ್ಧ ತೀವೃ ಹೋರಾಟಕ್ಕೆ ಕಾರ್ಮಿಕರು ಅಣಿಯಾಗಬೇಕಿದೆ ಎಂದು ಕರೆನೀಡಿದರು.

ಮುಖ್ಯ ಅತಿಥಿಗಳಾಗಿ ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ದ.ಕ ಜಿಲ್ಲಾ ಸಿಐಇಯುನ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್ ಬಜಾಲ್, ಜಿಲ್ಲಾ ಕಾರ್ಮಿಕ ನಾಯಕರಾದ ಶಶಿಧರ್ ಗೊಲ್ಲ, ಕವಿರಾಜ ಉಡುಪಿ, ಶೇಖರ್ ಕುಲಾಲ್ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!