ಇಂದ್ರಾಳಿ ಬೈಕ್ ಶೋರೂಂಗೆ ಬೆಂಕಿ ಕೋಟ್ಯಾಂತರ ರೂ. ನಷ್ಟ
ಉಡುಪಿ: ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭ ಶೋರೂಮ್ ಪಕ್ಕವೇ ಟ್ರಾನ್ಸ್ಫಾರ್ಮರ್ ಅಳವಡಿಸಿದ ಕಾರಣದಿಂದ ಈ ದುರಂತ ನಡೆದಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ನಿನ್ನೆ ರಾತ್ರಿ ಸುಮಾರು 9 .45 ಸುಮಾರಿಗೆ ಟ್ರಾನ್ಸ್ಫಾರ್ಮರ್ ಶಾರ್ಟಾಗಿ ಬೆಂಕಿ ಉಂಟಾಗಿ ಶೋರೂಮ್ ನ ನಾಮಫಲಕಕ್ಕೆ ತಾಗಿದ ಪರಿಣಾಮ ಅದು ಸುಟ್ಟು, ನಂತರಕಟ್ಟಡಕ್ಕೆ ಆವರಿಸಿದ ಬೆಂಕಿ ಶೋರೂಮ್ ಒಳಕ್ಕೂ ಹಬ್ಬಿ ಶೋರೂಮ್ ಒಳಗೆ ಇದ್ದ ಹೊಸತು 2 ಬೈಕ್ ,ಸರ್ವಿಸ್ ಗೆ ಇಡಲಾದ 10 ಬೈಕ್ ಬೆಂಕಿಗೆ ಆಹುತಿಯಾಗಿದೆ. ಕಟ್ಟಡದ ನೆಲ ಅಂತಸ್ತಿನ ಲ್ಲಿ ವಾಹನಗಳ ಬೀಡಿ ಭಾಗದ ವಿಭಾಗವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಅಗ್ನಿಶಾಮಕದಳದ 2 ವಾಹನಗಳಿಂದ ೮ ಟ್್ಯಾಂಕರ್ ನೀರು ,16 ಸಿಿಬ್ಬಂದ ಗಳ ಸತತ ಐದು ಗಂಟೆಗಳ ಪರಿಶ್ರಮದಿಂದ ಬೆಂಕಿ ನಂದಿಸಲಾಯಿಯತು. ಘಟನೆಯ ತನಿಖೆಗೆ ಮಂಗಳೂರಿನಿಂದ ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಆಗಮಿಸಿ ಬೆಂಕಿ ಹರಡಲು ಕಾರಣವೆನೆಂದು ಪತ್ತೆ ಹಚ್ಚುತ್ತಿದ್ದಾರೆ.
ನಿನ್ನೆ ರಾತ್ರಿ ಶೋರೂಮ್ ಗೆ ಬೆಂಕಿ ತಗುಲಿದ ತಕ್ಷಣ ಮಣಿಪಾಲ ಉಡುಪಿ ಪೊಲೀಸರು ಸ್ಥಳಕ್ಕಾಗಮಿಸಿ ಅಗ್ನಿಶಾಮಕದಳದ ಸಿಬ್ಬಂದಿಗಳ ಜೊತೆ
ಕೈಜೋಡಿಸಿದ್ದಾರೆ.
ತಡ ರಾತ್ರಿ 3 ಗಂಟೆಗೆ ಬೆಂಕಿ ನಂದಿಸುವಲ್ಲಿ ಸಫಲವಾಗಿದ್ದಾರೆ . ಬೆಂಕಿ ಬಿದ್ದ ವಿಷಯ ವಾಟ್ಸ್ ಆಪ್ ನಲ್ಲಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಸಾವಿರಾರು ಜಮಾಯಿಸಿದ್ದರು.
ಪೊಲೀಸ್ ಬಂದೋಬಸ್ತ್ ಹೆಚ್ಚಿಸಿದ್ದು ,ಅರ್ಧ ಸುಟ್ಟ ಬೈಕ್ ಹೊತ್ತೊಯ್ಯುಬಹುದೆಂದು ಭದ್ರತೆಗಾಗಿ ಸಶಸ್ತ್ರ ಮೀಸಲು ಪಡೆಯ ಹೆಚ್ಚು ವರಿ ಸಿಬ್ಬಂದಿ ಗಳನ್ನು ಶೋರೂಮ್‌ಗೆ ನಿಯೋಜಿಸಲಾಗಿದೆ.ಕಟ್ಟಡದಲ್ಲಿದ್ದ ಇತರ ವ್ಯಾಪಾರ ಮಳಿಗೆಗಳಿಗೆ ಹಾನಿ ಉಂಟಾಗಿದೆ ಅದರಲ್ಲಿ ಕ್ಲಿನಿಕ್, ಜಿಮ್ ಸೆಂಟರ್ ಕಾರ್ಯಾಚರಿಸುತ್ತಿತ್ತು ಇವುಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
ತಪ್ಪಿದ ದೊಡ್ಡ ದುರಂತ:
ಶೋರೂಮ್ ಪಕ್ಕವೇ ಇಂಡಿಯನ್ ಒಯಿಲ್ ಪೆಟ್ರೋಲ್ ಪಂಪ್ ಇದ್ದು ಬೆಂಕಿಯು ಕಟ್ಟಡದ ಸುತ್ತಲೂ ಹಬ್ಬುತ್ತಿದ್ದಂತೆ ಪಂಪ್‌ಮಾಲಕರು ಪೆಟ್ರೋಲ್ ವಿತರಣೆ ಸ್ಥಗಿತಗೊಳಿಸಿದರು.