ಮಾರಣಕಟ್ಟೆ: ಮಾರುತಿ ಇಕೋ ಕಾರಿಗೆ ಬೆಂಕಿ

ಕುಂದಾಪುರ : ನಿಲ್ಲಿಸಿದ್ದ ಮಾರುತಿ ಇಕೋ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಚಿತ್ತೂರು ಬಳಿ ನಡೆದಿದೆ.
ಫೆ.22 ಶನಿವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ಕೊಲ್ಲೂರು-ಹೆಮ್ಮಾಡಿ ರಸ್ತೆಯಲ್ಲಿ ಸ್ಥಳೀಯ ನಿವಾಸಿ ಗೋಪಾಲ್ ಆಚಾರಿಯವರು ಕಾರನ್ನು ರಸ್ತೆ ಬದಿ ನಿಲ್ಲಿಸಿ ಮನೆಗೆ ತೆರಳಿದ್ದರು. ಈ ವೇಳೆ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.

ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಅಲ್ಲಿಯೇ ನಡೆಯುತ್ತಿದ್ದ ರಸ್ತೆ ದುರಸ್ತಿಗಾಗಿ ಬಂದಿದ್ದ ನೀರಿನ ಟ್ಯಾಂಕರ್‌ನಿಂದ ನೀರು ಹಾಕಿ ಬೆಂಕಿ ನಂದಿಸುವ ಯತ್ನ ಮಾಡಿದರು. ನಂತರ ಕುಂದಾಪುರ ಅಗ್ನಿಶಾಮಕ ದಳವು ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸಲು ಪ್ರಯತ್ನ ಪಟ್ಟರು. ಅಷ್ಟೋತ್ತಿಗಾಗಲೇ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!