ಈಶ್ವರಪ್ಪ ಮನೆಯಲ್ಲಿ ಬೆಂಕಿ ಅವಘಡ: ಪ್ರಾಣಾಪಾಯದಿಂದ ಪಾರಾದ ಸಚಿವರು, ಪತ್ನಿ

ಬೆಂಗಳೂರು: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ತಾಂತ್ರಿಕ ದೋಷದಿಂದ ಅಗ್ನಿ ಅವಘಡ ಸಂಭವಿಸಿದ್ದು, ಸಚಿವರು ಹಾಗೂ ಅವರ ಪತ್ನಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ನಡೆದಿದೆ. 

ಗಾಂಧಿ ಭವನದ ಸಮೀಪ ಇರುವ ಸಚಿವರ ಸರ್ಕಾರಿ ನಿವಾಸದಲ್ಲಿ ಸಚಿವರು ಬೆಡ್ ರೂಮ್ ಎಸಿ ಸ್ವಿಚ್ ಹಾಕುತ್ತಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಈಶ್ವರಪ್ಪ ಮತ್ತು  ಅವರ ಪತ್ನಿ ಮನೆಯಿಂದ ಹೊರಗೆ ಬಂದು ಅಳಿಯನಿಗೆ ವಿಚಾರ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬೆಡ್ ರೂಮ್ ಸಂಪೂರ್ಣವಾಗಿ ಭಸ್ಮವಾಗಿದೆ. ರೂಮ್’ನಲ್ಲಿದ್ದ ಬೆಡ್, ಎಸಿ, ಬಟ್ಟೆಗಲು, ಸೋಫಾ, ಕರ್ಟನ್ ಎಲ್ಲವೂ ಸುಟ್ಟು ಭಸ್ಮವಾಗಿದೆ. ರಾತ್ರಿ ವೇಳೆಯೇ ದುರಸ್ತಿಗೊಳಿಸುವ ಕಾರ್ಯ ನಡೆದಿದೆ. 

Leave a Reply

Your email address will not be published. Required fields are marked *

error: Content is protected !!