ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನ: ಅನ್ಸರ್ ವಿರುದ್ಧ ದೂರು
ಕುಂದಾಪುರ – ಉಡುಪಿಯಲ್ಲಿ ಜನವರಿ 11 ರಂದು ನಡೆಯಲಿರುವ ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನ ಅನೇಕ ವಿವಾದಗಳಿಗೆ ಕಾರಣವಾಗಿದ್ದು ಇದಕ್ಕೆ ಮತ್ತೊಂದು ವಿವಾದ ಸೇರ್ಪಡೆಗೊಂಡಿದೆ ,ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನದ ವಿಷಯದ ಕುರಿತು ವಿವಾದಗಳು ಎದ್ದಾಗ ಕೋಟ ಶ್ರೀನಿವಾಸ್ ಪೂಜಾರಿ ತನ್ನ ಭಾಗವಸುವಿಕೆಯ ಕುರಿತಾದ ಸ್ಪಷ್ಟನೆ ನೀಡಿದ ನಂತರವೂ ಕೋಟ ಶ್ರೀನಿವಾಸ್ ಪೂಜಾರಿ ಯವರು ಒಪ್ಪಿಗೆ ನೀಡಿದ್ದರು ಎಂಬ ಅನ್ಸರ್ ಅಹಮದ್ ನೀಡಿರುವ ಹೇಳಿಕೆಗೆ ಕೋಟ ಅಭಿಮಾನಿಗಳು ಸಿಟ್ಟುಗೊಂಡಿದ್ದು ಅನ್ಸರ್ ವಿರುದ್ಧ ಕುಂದಾಪುರ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಬಿಲ್ಲವ ಮುಸ್ಲಿಂ ಸ್ನೇಹ ಸಮ್ಮೇಳನದ ಪರ ವಿರುದ್ಧ ಅಲೆಗಳು ಎದ್ದಿದು, ಅನ್ಸರ್ ಇತ್ತೀಚಿಗೆ ನೀಡಿರುವ ಹೇಳಿಕೆಯಲ್ಲಿ ಶ್ರೀನಿವಾಸ್ ಪೂಜಾರಿ ಹಾಗು ಬಿಜೆಪಿ ನಾಯಕರ ವಿರುದ್ಧ ಮಾತನಾಡಿದ್ದು , ಇದೀಗ ಅದು ವಿವಾದಕ್ಕೆ ಕಾರಣವಾಗಿದೆ ಅನ್ಸರ್ ಅಹ್ಮದ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಕುಂದಾಪುರ ಪಿ ಎಸ್ ಐ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಕೋಟ ಅಭಿಮಾನಿಗಳು ಮಾಧ್ಯಮದವರಿಗೆ ತಿಳಿಸಿದ್ದಾರೆ