ಫಾ.ಮಹೇಶ್ ಆತ್ಮಹತ್ಯೆ ಪ್ರಕರಣ: ಡೇವಿಡ್ ಡಿಸೋಜಾ ಅವಹೇಳನ,ಇಬ್ಬರ ವಿರುದ್ಧ ದೂರು ದಾಖಲು
ಉಡುಪಿ: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಫಾದರ್ ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಮತ್ತು ಇವರ ಮಗ ಕಾರಣ ಹಾಗೂ ಇವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಇವರ ವಿರುದ್ಧನ್ಯಾಯಾಲಯವು ದೂರು ದಾಖಲಿಸಿ ತನಿಖೆ ನಡೆಸುವಂತೆ ಶಿರ್ವ ಠಾಣೆಗೆ ನಿರ್ದೇಶನ ನೀಡಿದೆ. ಅಕ್ಟೋಬರ್ 11ರಂದು ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಫಾದರ್ ಮಹೇಶ್ ಡಿಸೋಜ ಶಾಲೆ ಪ್ರಿನ್ಸಿಪಾಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು . ಇವರ ಆತ್ಮಹತ್ಯೆಗೆ ಮುದರಂಗಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಡೇವಿಡ್ ಡಿಸೋಜ ಮತ್ತು ಆತನ ಮಗ ಕಾರಣ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅವಹೇಳನಕಾರಿಯಾಗಿ ಬರೆದ ಕುತ್ಯಾರಿನ ಜೋಯಲ್ ಮಥಾಯಿಸ್ ಮತ್ತು ಪ್ಲೇವಿಯಾ ಮಥಾಯಿಸ್ ಅದನ್ನು ವೈರಲ್ ಮಾಡಿರುವ ಬಗ್ಗೆ ಉಡುಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಡೆವಿಡ್ ಡಿಸೋಜಾದೂರು ನೀಡಿದ್ದರು . ಆದರೆ ಇವರಿಗೆ ಪೊಲೀಸರು ಕೇವಲ ಎಚ್ಚರಿಕೆ ಕೊಟ್ಟು ಕಳುಹಿಸಿದ್ದ ಪರಿಣಾಮ ಇವರು ನಂತರ ಇದೇ ರೀತಿ ಅವಹೇಳನಕಾರಿ ಪೋಸ್ಟ್ಗಳನ್ನು ಸಾರ್ವಜನಿಕವಾಗಿ ಪ್ರಚಾರಪಡಿಸಿದ್ದರು. ಇದರಿಂದ ಅಧ್ಯಕ್ಷ ಡೇವಿಡ್ ಡಿಸೋಜಾ ಅವರು ನನ್ನ ಘನತೆಗೆ ಕುಂದುವುಟಾಗಿ, ಸಾರ್ವಜನಿಕವಾಗಿ ತಿರುಗಾಡಲು ಕಷ್ಟಸಾಧ್ಯವಾಗಿದ್ದು, ಮಾನಹಾನಿ ಮಾಡಿದ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಮುದರಂಗಡಿ ಗ್ರಾಮ ಪಂಚಾಯತ ಅಧ್ಯಕ್ಷ ಡೇವಿಡ್ ಡಿಸೋಜಾ ಅವರ ದೂರನ್ನು ಪುರಸ್ಕರಿಸಿದ ನ್ಯಾಯಾಲಯ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಶಿರ್ವ ಠಾಣೆಗೆ ನಿರ್ದೇಶನ ನೀಡಿದೆ. |