ಎನ್ ಕೌಂಟರ್:ಜೈಲಿನಲ್ಲಿರುವ ಇತರರನ್ನೂ ಶೂಟ್ ಮಾಡಿ,ಬಳಿಕವಷ್ಟೇ ಪತಿಯ ಅಂತ್ಯಸಂಸ್ಕಾರ
ಹೈದರಾಬಾದ್: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ಪೊಲೀಸರ ಕ್ರಮವನ್ನು ಬೆಂಬಲಿಸಿ ದೇಶಾದ್ಯಂತ ಸಂಭ್ರಮಾಚರಣೆ ಮುಂದುವರೆದಿರುವುದಕ್ಕೆ ಎನ್ ಕೌಂಟರ್ ನಲ್ಲಿ ಹತನಾದ ಆರೋಪಿಯೊರ್ವನ ಪತ್ನಿ ಆಕ್ರೋಶದ ಮಾತು .
ಅಪರಾಧಗಳನ್ನು ಮಾಡಿ ಎಷ್ಟೋ ಮಂದಿ ಜೈಲಿನಲ್ಲಿದ್ದಾರೆ. ಅವರನ್ನು ಕೂಡಾ ಇದೇ ರೀತಿಯಲ್ಲಿ ಪೊಲೀಸರು ಗುಂಡಿಕ್ಕಿ ಸಾಯಿಸಲಿ. ಅಲ್ಲಿಯವರೆಗೂ ತಮ್ಮ ಪತಿಯ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ. ಅವರೆಲ್ಲರನ್ನೂ ಶೂಟ್ ಮಾಡಿದ ಬಳಿಕವಷ್ಟೇ ಅಂತ್ಯಸಂಸ್ಕಾರ ನೆರವೇರಿಸುವುದಾಗಿ ಮೃತ ಆರೋಪಿ ಚೆನ್ನಕೇಶವಲುವಿನ ಹೆಂಡತಿ ರೇಣುಕಾ ಹೇಳಿದ್ದಾರೆ.
ನಾರಾಯಣಪೇಟೆ ಜಿಲ್ಲೆಯ ತಮ್ಮ ಹಳ್ಳಿಯಲ್ಲಿ ರಸ್ತೆಯಲ್ಲಿಯೇ ಗೋಳಾಡುತ್ತಿದ್ದ ಗರ್ಭೀಣಿ ಮಹಿಳೆಯಾಗಿರುವ ರೇಣುಕಾ, ನನಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದಳು.
ಪತಿಗೆ ಏನೂ ಆಗಲ್ಲ, ಮತ್ತೆ ಮನೆಗೆ ಬರುತ್ತಾರೆ ಎಂದು ಹೇಳಲಾಗಿತ್ತು, ಆದರೆ, ಈಗ ಏನಾಯಿತು ಎಂಬುದು ಗೊತ್ತಿಲ್ಲ. ತಮ್ಮ ಪತಿ ಹತ್ಯೆಯಾದ ಸ್ಥಳಕ್ಕೆ ನನ್ನನೂ ಕರೆದುಕೊಂಡು ಹೋಗಿ ಸಾಯಿಸಿ ಎಂದು ಆಕೆ ನಿನ್ನೆ ಕೂಡಾ ಪೊಲೀಸರ ಕ್ರಮದ ವಿರುದ್ಧ ಆಕ್ರೋಶಭರಿತ ಮಾತುಗಳನ್ನಾಡಿದ್ದಳು.
ಎನ್ ಕೌಂಟರ್ ನಲ್ಲಿ ಬಲಿಯಾದ ನಾಲ್ವರು ಬಡ ಕುಟುಂಬಕ್ಕೆ ಸೇರಿದ್ದು, ಚೆನ್ನಾಗಿ ಸಂಪಾದಿಸುತ್ತಿದ್ದರು. ಆದರೆ, ಮದ್ಯ ಮತ್ತಿತರ ಚಟಗಳಿಗೆ ದಾಸರಾಗಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಈ ಮಧ್ಯೆ ಕಿರಾತಕರ ಸಾವಿನ ಸಂಭ್ರಮಾಚರಣೆ ಇಂದು ಕೂಡಾ ನಡೆಯಿತು.