ಎನ್ ಕೌಂಟರ್: ಕಾನೂನು ತನ್ನ ಕರ್ತವ್ಯ ಮಾಡಿದೆ ಪೊಲೀಸ್ ಆಯುಕ್ತ ವಿಶ್ವನಾಥ್
ಹೈದರಾಬಾದ್; ಪಶುವೈದ್ಯೆ ಮೇಲೆ ಹತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಸಾಯಿಸಿದ್ದು ತಮ್ಮ ಸ್ವ ರಕ್ಷಣೆಗಾಗಿ ಎಂದು ಸೈಬರಾಬಾದ್ ಪೊಲೀಸ್ ಆಯುಕ್ತ ವಿ ಸಿ ಸಜ್ಜನರ್ ತಿಳಿಸಿದ್ದಾರೆ.
ನಮ್ಮ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆದರೆ ನಾವು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ನಾವು ಗುಂಡು ಹಾರಿಸಲೇಬೇಕಾಗುತ್ತದೆ. ಆರೋಪಿಗಳು ನಮ್ಮ ಮೇಲೆ ದಾಳಿ ಮಾಡಿ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ್ದರು ಎಂದು ಇಂದು ಸಜ್ಜನರ್ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸ್ಥಳ ಮಹಜರು ನಡೆಸಲು ಆರೋಪಿಗಳನ್ನು ಇಂದು ಮದ್ಯರಾತ್ರಿ 2 ಗಂಟೆ ಸುಮಾರಿಗೆ ಪ್ರಕರಣ ನಡೆದ ಟೊಂಡುಪಳ್ಳಿ ಟೋಲ್ ಗೇಟ್ ಹತ್ತಿರ ಪೊಲೀಸರ ಬೆಂಗಾವಲು ಪಡೆಯೊಂದಿಗೆ ವಾಹನದಲ್ಲಿ ಕರೆದುಕೊಂಡು ಹೋಗಲಾಗಿತ್ತು. ಆರೋಪಿಗಳನ್ನು ವಿಚಾರಣೆ ನಡೆಸಿ ನಂತರ ಪಶುವೈದ್ಯೆಯನ್ನು ಬೆಂಕಿಯಲ್ಲಿ ಸುಟ್ಟಿದ್ದ ಚಟಂಪಳ್ಳಿ ಸುರಂಗದ ಹತ್ತಿರ ಕರೆದುಕೊಂಡು ಹೋಗಲಾಯಿತು.
ಕಳೆದ ನವೆಂಬರ್ 28ರಂದು ರಾತ್ರಿ ಏನೇನು ನಡೆಯಿತು ಎಂದು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ಇಬ್ಬರು ಆರೋಪಿಗಳಾದ ಅರಿಫ್ ಮತ್ತು ಚೆನ್ನಕೇಶವಲು ಪೊಲೀಸರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು.
ಅಲ್ಲದೆ ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಈ ಹಂತದಲ್ಲಿ ಸ್ವ ರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಬೇಕಾಯಿತು. ದಾಳಿಯಲ್ಲಿ ನಾಲ್ವರು ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ವಿ ಸಿ ಸಜ್ಜನರ್ ವಿವರಿಸಿದರು.