ನಾಳೆ (ಫೆ.4) ರಾಷ್ಟ್ರವ್ಯಾಪ್ತಿ ಎಲ್ಐಸಿ ಷೇರು ಮಾರಾಟದ ವಿರುದ್ಧ ನೌಕರರ ಪ್ರತಿಭಟನೆ

ಉಡುಪಿ: ಬಜೆಟ್ ಕೇಂದ್ರ ಹಣಕಾಸು ಸಚಿವರು ಭಾರತೀಯಜೀವ ವಿಮಾ ನಿಗಮ (ಎಲ್.ಐ.ಸಿ)ದ ಸ್ವಲ್ಪ ಪಾಲನ್ನು ಮಾರಾಟಲಾಗುವುದು ಎಂದು ಪ್ರಕಟಿಸಿದ್ದಾರೆ,1956 ರಲ್ಲಿ ಸರಕಾರವು ಹೂಡಿರುವ ರೂಪಾಯಿ ಐದು ಕೋಟಿ ಬಂಡವಾಳಕ್ಕೆ ಎಲ್.ಐ.ಸಿಯು ಇಲ್ಲಿಯವರೆಗೆ ಸರಕಾರಕ್ಕೆ ರೂಪಾಯಿ 26,005.38ಕೋಟಿಯಷ್ಟು ಲಾಭಾಂಶ ನೀಡಿದೆ. ಈ ದೇಶದ ಮೂಲಭೂತಸೌಕರ್ಯಗಳಲ್ಲಿ ಎಲ್.ಐ.ಸಿ ಹೂಡಿಕೆಯನ್ನು ಮಾಡಿದ್ದು ದೇಶದ ಪ್ರಗತಿಗೆ ತನ್ನದೇ ಕೊಡುಗೆಯನ್ನುನೀಡಿದೆ. ಇಂತಹ ಸಂಸ್ಥೆಯನ್ನು ಸರಕಾರವು ಖಾಸಗೀಕರಣ ಮಾಡುವ ಪ್ರಕ್ರಿಯೆಯ ಭಾಗವಾಗಿರುವ ಷೇರು ಮಾರಾಟ ಪ್ರಕ್ರಿಯೆಯನ್ನುವಿರೋಧಿಸಿ ಫೆ.4 ರಂದು ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಹೊರನಡಿಗೆಮುಷ್ಕರಕ್ಕೆ ಕರೆ ನೀಡಲಾಗಿದೆ.

ಈ ಮುಷ್ಕರದಲ್ಲಿಅಖಿಲ ಭಾರತ ವಿಮಾ ನೌಕರರ ಸಂಘ, ಎಲ್.ಐ.ಸಿ ಅಧಿಕಾರಿಗಳ ಸಂಘ ಮತ್ತು ಎಲ್.ಐ.ಸಿ ಅಭಿವೃದ್ಧಿಅಧಿಕಾರಿಗಳ ಸಂಘದ ಸದಸ್ಯರು ಭಾಗವಹಿಸಲಿದ್ದಾರೆ. ಈ ಮುಷ್ಕರದ ಪ್ರಯುಕ್ತ ಉಡುಪಿಯಅಜ್ಜರಕಾಡಿನಲ್ಲಿರುವ ಎಲ್.ಐ.ಸಿ ವಿಭಾಗೀಯ ಕಛೇರಿಯ ಆವರಣದಲ್ಲಿ ಮದ್ಯಾಹ್ನ 12 ಗಂಟೆಗೆ ಸರಿಯಾಗಿ ಮತಪ್ರದರ್ಶನ ನಡೆಯಲಿ ಎಂದು ವಿಮಾ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್  ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!