ಉಡುಪಿ: ಕರ್ತವ್ಯಲೋಪ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಅಮಾನತು

ಉಡುಪಿ: ನಗರದ ಪಾರ್ಕನಲ್ಲಿ ಅಸಭ್ಯ ವರ್ತನೆ ತೋರಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಯಾವುದೇ ದೂರು ದಾಖಲಿಸಿಕೊಳ್ಳದೆ ಕರ್ತವ್ಯ ಲೋಪ ನಡೆಸಿರುವ ಪ್ರಕರಣದಲ್ಲಿ ಉಡುಪಿ ನಗರ ಠಾಣಾ ಎಸ್ಸೈ ಹಾಗೂ ಹೆಡ್‌ಕಾನ್‌ಸ್ಟೇಬಲ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಮಾನತುಗೊಳಿಸಿದ್ದಾರೆ.

ನ.2ರಂದು ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಗೆಳತಿಯೊಂದಿಗೆ ಮಾತನಾಡುತ್ತಿದ್ದ ಯುವಕರ ಮೇಲೆ ತಂಡವೊಂದು ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಉಡುಪಿ ನಗರ ಠಾಣಾ ಎಸ್ಸೈ ಹಾಗೂ ಹೆಡ್‌ಕಾನ್‌ಸ್ಟೇಬಲ್ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ. ಉಡುಪಿ ನಗರ ಠಾಣಾ ಪೊಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ಹಾಗೂ ಹೆಡ್‌ಕಾನ್‌ಸ್ಟೇಬಲ್ ಜೀವನ್ ಅಮಾನತುಗೊಂಡಿದ್ದಾರೆ .


ಸ್ನೇಹಿತರಾದ ಆಶೀಸ್, ಶಾನು, ತಾಹಿಮ್ ಮತ್ತು ಶಿವಾನಿ ಎಂಬವರು ನ.2ರಂದು ರಾತ್ರಿ 8 ಗಂಟೆ ಸುಮಾರಿಗೆ ಅಜ್ಜರಕಾಡು ಭುಜಂಗ ಪಾರ್ಕಿನಲ್ಲಿ ಕುಳಿತು ಮಾತನಾಡುತ್ತಿರುವಾಗ ಅಸಭ್ಯ ವರ್ತನೆ ತೋರಿದರು ಎನಲಾಗುತ್ತಿದ್ದೆ ಈ ಸಂದರ್ಭ ಸುನೀಲ್ ಪೂಜಾರಿ, ರಾಕೇಶ್ ಸುವರ್ಣ ಮತ್ತು ಇತರರು ಇವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರೆನ್ನಲಾಗಿತ್ತು.

ಅಷ್ಟೇ ಅಲ್ಲದ್ದೆ ನ.4ರಂದು ಅಶೀಸ್ ಮತ್ತು ಶಿವಾನಿಯ ಭಾವಚಿತ್ರ ಗಳನ್ನು ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡಿ ವಾಟ್ಸಾಪ್‌ನಲ್ಲಿ ವೈರಲ್ ಮಾಡಲಾಗಿತ್ತು ಮತ್ತು ಹಾಗು ಹಲ್ಲೆ ಪ್ರಕರಣದ ಫೋಟೋಗಳನ್ನು ತೆಗೆದಿರುವ ಕುರಿತು ನ.5ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಕೃಷ್ಣಾನಂದ ಎಂಬವರು ಈ ಕುರಿತು ಪ್ರತಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣಾ ಎಸ್ಸೈ ಹಾಗೂ ಹೆಡ್‌ಕಾನ್‌ಸ್ಟೇಬಲ್ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಅವರನ್ನು ಜಿಲ್ಲಾ ಎಸ್ಪಿ ಅಮಾನತುಗೊಳಿಸಿದ್ದಾರೆ.

1 thought on “ಉಡುಪಿ: ಕರ್ತವ್ಯಲೋಪ ಎಸ್ಸೈ, ಹೆಡ್‌ಕಾನ್‌ಸ್ಟೇಬಲ್ ಅಮಾನತು

  1. Prathi dooru kottiro Krishnanadha avru Shivani thandde erbeku…adru thamma maglu kathaleli anyya komu na hudagara jothe lalle hodithirodu thappu antha anisade magalige buddi kalisade ooru thirglikke bittrodu thappalve!? Yendru hechhu kammi adre samaja vannu dooruva evru omme yochane madodu olledu… Nimaganthu nimma magalannu control madlikke agilla , public place nalli public agi anaithika vagi nadkondre Jana buddi kalse kalisthare… Ennomme yochane Madi Krishnanadha avare

Leave a Reply to Muralidhar Shettigar Cancel reply

Your email address will not be published. Required fields are marked *

error: Content is protected !!