ದುಗ್ಲಿ ಪದವು ಯುವ ಸೇವಾ ಸಂಘ: ಸಹಾಯ ಧನ ವಿತರಣೆ


ಉಡುಪಿ: ಯುವ ಟೈಗರ್ಸ್‌ ಹಾಗೂ ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇದರ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ವೇಷಧರಿಸಿ ಸಂಗ್ರಹಿಸಿದ 2,01,780 ಲಕ್ಷ ರೂ. ಮೊತ್ತವನ್ನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸೈಬ್ರಕಟ್ಟೆ ನಿವಾಸಿ ಸಿಂಚನ
ಅವರ ವೈದ್ಯಕೀಯ ಚಿಕಿತ್ಸೆಗೆ ಭಾನುವಾರ ಸಂಘದ ಆವರಣದಲ್ಲಿ ಹಸ್ತಾಂತರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೈನಿಕ ಅಶೋಕ್‌ ಕೋಟ್ಯಾನ್‌
ವಿದ್ಯಾರ್ಥಿ ಸಿಂಚನ ಅವರಿಗೆ ಸಹಾಯಧನದ ಚೆಕ್‌ ವಿತರಿಸಿದರು.
ಪೊಲೀಸ್‌ ಕಾನ್‌ಸ್ಟೇಬಲ್‌ ರಾಮಚಂದ್ರ, ನಿವೃತ್ತ ಸೈನಿಕ ಚಂದ್ರಶೇಖರ್‌, ಸ್ಥಳೀಯರಾದ ಸುಮತಿ ಶೇರಿಗಾರ್‌, ವಿಶ್ವಮೂರ್ತಿ ಆಚಾರ್ಯ, ಗೋಪಾಲಪೂಜಾರಿ ಮಂಚಿ, ದಿನೇಶ್‌ ಶಾನುಭಾಗ್‌, ಅಂಗನವಾಡಿ ಶಿಕ್ಷಕಿ ಶಕುಂತಲಾ, ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಿಕ್ರಂ ಮಂಚಿ ಸ್ವಾಗತಿಸಿದರು. ಸತೀಶ್‌ ಶೆಟ್ಟಿ ದುಗ್ಲಿಪದವು ವಂದಿಸಿದರು. ವಿನೋದ್‌ ಮಂಚಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!