ದ.ಕ. ಹಾಲು ಒಕ್ಕೂಟ ಉಡುಪಿ ಡೇರಿ ಘಟಕಕ್ಕೆ ಡಾ|ಡಿ.ವೀರೇಂದ್ರ ಹೆಗ್ಗಡೆ ಭೇಟಿ
ದಕ್ಷಿಣ ಕನ್ನಡ ಹಾಲು ಒಕ್ಕೂಟವು ತನ್ನ ವಿನೂತನ ಯೋಜನೆಗಳಿಂದ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದು, ಅನೇಕ ಹೈನುಗಾರರ ಬೆನ್ನೆಲುಬಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇನ್ನಷ್ಟು ಯಶಸ್ಸನ್ನು ಕರುಣಿಸಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ | ಡಿ. ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸಿದರು.
ದ.ಕ. ಹಾಲು ಒಕ್ಕೂಟದ ಉಡುಪಿ ಡೇರಿ ಘಟಕಕ್ಕೆ ಇಂದು ಅವರು ಡೇರಿ ಪರಿವೀಕ್ಷಣೆಗಾಗಿ ಆಗಮಿಸಿದ್ದು, ಒಕ್ಕೂಟದ ಆಡಳಿತ ಮಂಡಳಿ ಹಾಗೂ ನೌಕರ ವರ್ಗದಿಂದ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಸ್ವಾಗತಿಸಲಾಯಿತು. ಉಡುಪಿ ಡೇರಿಯ ಕಾರ್ಯವೈಖರಿ ಹಾಗೂ ಸ್ವಚ್ಛತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮ ನಡೆಸಿ ಪೂಜ್ಯರನ್ನು ಗೌರವಿಸಲಾಯಿತು. ಒಕ್ಕೂಟದ ಅಧ್ಯಕ್ಷರಾದ ಕೆ. ರವಿರಾಜ ಹೆಗ್ಡೆಯವರು ಪ್ರಸ್ತಾವನೆಗೈದು ಸ್ವಾಗತಿಸಿದರು.
ನಿರ್ದೇಶಕರಾದ ಕೆ.ಪಿ. ಸುಚರಿತ ಶೆಟ್ಟಿ ವಂದನಾರ್ಪಣೆಗೈದರು. ಸಹಾಯಕ ವ್ಯವಸ್ಥಾಪಕ ಶ್ರೀ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರು – ಜಗದೀಶ್ ಕಾರಂತ್, ಹದ್ದೂರು ರಾಜೀವ್ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ , ಸಾಣೂರು ನರಸಿಂಹ ಕಾಮತ್, ಸ್ಮಿತಾ ಶೆಟ್ಟಿ, ಸುಭದ್ರಾ ರಾವ್, ಸುಧಾಕರ ಶೆಟ್ಟಿ, ಸುಧಾಕರ ರೈ,ಸವಿತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ. ಹೆಗ್ಡೆ, ಉಪ ವ್ಯವಸ್ಥಾಪಕರು ಡಾ.ರಾಮಕೃಷ್ಣ ಭಟ್, ಡಾ. ಮನೋಹರ್,ಡಾ. ಅನಿಲ್ ಕುಮಾರ್ ಶೆಟ್ಟಿ, ಟಿ. ಲಕ್ಕಪ್ಪ, ಮುನಿರತ್ನಮ್ಮ , ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.