ಡಬ್ಬಲ್ ಮರ್ಡರ್ : ಪ್ರಮುಖ ಆರೋಪಿಯ ಸೆರೆ
ಬಂಟ್ವಾಳ : ಪರಂಗಿಪೇಟೆಯಲ್ಲಿ ಎರಡುವರ್ಷಗಳ ಹಿಂದೆ ನಡೆದ ಡಬ್ಬಲ್ ಮರ್ಡರ್ ಕೇಸ್ ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯೋರ್ವನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಮಂಗಳೂರಿನ ಕಂಕನಾಡಿಯಲ್ಲಿ ಬಂಧಿಸಿದ್ದಾರೆ.ಮಾರಿಪಳ್ಳ ನಿವಾಸಿ ಜಬ್ಬಾರ್ ಬಂಧಿತ ಆರೋಪಿಯಾಗಿದ್ದಾನೆ. ಇದರೊಂದಿಗೆ ಈ ಕೇಸ್ ನಲ್ಲಿ ಬಂಧಿತರ ಸಂಖ್ಯೆ 13 ಕ್ಕೇರಿದೆ. ಈ ಹತ್ಯಾ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದು ,ಕೃತ್ಯದ ಬಳಿಕ ಜಬ್ಬಾರ್ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡೊದ್ದ.
ಕಳೆದ ಎರಡು ವರ್ಷಗಳಿಂದ ಪೋಲೀಸರ ಕಣ್ತತಪ್ಪಿಸಿ ವಿದೇಶದಲ್ಲಿ ನೆಲೆಯಾಗಿದ್ದ ಈತ ವಾಪಾಸ್ ಊರಿಗೆ ಬಂದು ಮಂಗಳೂರಿನ ಕಂಕನಾಡಿಯಲ್ಲಿ ವಾಸವಾಗಿದ್ದನೆನ್ನಲಾಗಿದೆ. ಈತನ ಸುಳಿವು ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿಯಾಧಾರದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ ರವರ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಿದ ಗ್ರಾಮಾಂತರ ಎಸ್ ಐ. ಎಸ್.ಪ್ರಸನ್ನ ಮತ್ತು ತಂಡ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ ?:
2017 ಸೆ.25 ರಂದು ರಾತ್ರಿ ಸುಮಾರು 10.45 ರ ವೇಳೆ ಪರಂಗಿಪೇಟೆ ಹೋಟೇಲ್ ಒಂದರ ಎದುರಿನಲ್ಲಿ ನಡೆದ ಕಣ್ಣೂರಿನ ಜಿಯಾ ಗ್ಯಾಂಗ್ ಮತ್ತು ಮಾರಿಪಳ್ಳದ ಜಬ್ಬಾರ್ ಗ್ಯಾಂಗ್ ಮಧ್ಯೆ ನಡೆದ ಗ್ಯಾಂಗ್ ವಾರ್ ನಲ್ಲಿ ಜಿಯಾ ಯಾನೆ ರಿಯಾಝ್ ಹಾಗೂ ಫಯಾಜ್ ಎಂಬವರಿಬ್ಬರು ಹತ್ಯೆಯಾಗಿದ್ದರು, ಉಳಿದಂತೆ ಜಿಯಾ ಗ್ಯಾಂಗ್ ನ ಕೆಲವರು ಗಾಯಗೊಂಡಿದ್ದರು.
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಜಬ್ಬಾರ್ ಗ್ಯಾಂಗ್ ನ 12 ಮಂದಿಯನ್ನು ಪೋಲೀಸರು ಬಂಧಿಸಿ ದ್ದು,ಪ್ರಮಖ ಆರೋಪಿ ಜಬ್ಬಾರ್ ತಲೆಮರೆಸಿದ್ದ.ಇದೀಗ ಅತನ ಬಂಧನ ಕಾರ್ಯಾಚರಣೆಯು ನಡೆದಿದೆ.
ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.