ಖಾತರ್‌ನಾಕ್ ಆದಿತ್ಯರಾವ್‌ನ ಬ್ಯಾಂಕ್ ಲಾಕರ್ ನಲ್ಲಿ ಏನಿತ್ತು ಗೊತ್ತೇ?
ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್‌ನನ್ನು ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಕರೆತಂದಿದ್ದಾರೆ.
ಆದಿತ್ಯ ರಾವ್ ಬ್ಯಾಂಕ್‌ನಲ್ಲಿ ಲಾಕರ್ ಹೊಂದಿದ್ದ ಮಾಹಿತಿಯ ಆಧಾರದಲ್ಲಿ ಮಂಗಳೂರು ಪೊಲೀಸರು ಇಂದು ಬೆಳಿಗ್ಗೆ 10.45 ಕ್ಕೆ ಬ್ಯಾಂಕ್‌ಗೆ ಆತನನ್ನು ಕರೆತಂದು ಸುಮಾರು ಎರಡು ತಾಸು ಪರೀಶೀಲನೆ ನಡೆಸಿದರು. ಈ ಸಂದರ್ಭ ಪೊಲೀಸರಿಗೆ ಇತನ ಲಾಕರ್‌ನಲ್ಲಿದ್ದ ಒಂದು ಕಟ್ಟು ತೆರೆದು ನೋಡಿದಾಗ ಕಾದಿತ್ತು ಅಚ್ಚರಿಯ ಸಂಗತಿ! ಆದಿತ್ಯ ರಾವ್ ಎಷ್ಟು ದೊಡ್ಡ ಖಾತರ್‌ನಾಕ್ ಆಸಾಮೀ ಎಂದು ಈ ಕಟ್ಟಿನಲ್ಲಿಯೇ ತಿಳಿಯುತ್ತದೆ.
ಬ್ಯಾಂಕ್ ಲಾಕರ್ ತೆರೆದ ಮೇಲೆ ಕೇವಲ ಎರಡು ಬಾರಿ ಬ್ಯಾಂಕ್ ಗೆ ಬಂದಿದ್ದ ಆದಿತ್ಯ ರಾವ್ ಲಾಕರ್‌ನಲ್ಲಿ ಸೈನೆಡ್ ಸಂಗ್ರಹಿಸಿಟ್ಟಿದ್ದ ಎಂದು ಇಂದು ಆತನ ಲಾಕರ್ ತೆರೆದಾಗ ಸಿಕ್ಕಿದೆಂದು ತಿಳಿದುಬಂದಿದೆ . ಸದ್ಯ ಇದನ್ನು ವಶಕ್ಕೆ ಪಡೆದ ತನಿಖಾಧಿಕಾರಿ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಇದರ ಸತ್ಯಾಸತ್ಯತೆ ಪರೀಶೀಲಿಸಲು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಲಯಕ್ಕೆ ಕಳುಹಿಸಿಕೊಡಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಲ್ಕನೇ ಶನಿವಾರವಾದ್ದರಿಂದ ಬ್ಯಾಂಕ್ ರಜಾ ದಿನವಾದರೂ ಕೂಡ ಅಧಿಕಾರಿಗಳನ್ನು ಕರೆಸಿ ಬ್ಯಾಂಕ್ ತೆರೆಸಲಾಗಿದೆ.
.