ಪ್ರೇಮಿಗಳ ದಿನ ಬೇಡ, ಪುಲ್ವಾಮ ಹುತಾತ್ಮರ ದಿನಾಚರಣೆ ಮಾಡಿ: ಸುನೀಲ್ ಕೆ.ಆರ್‌.

ಮಂಗಳೂರು: ಫೆ.14 ರಂದು ಪ್ರೇಮಿಗಳ ದಿನಾಚರಣೆ ಬೇಡ ಎಂದಿರುವ ಭಜರಂಗದಳ ಅಂದು ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹುತಾತ್ಮರ ದಿನಾಚರಣೆ ಕಾರಕ್ರಮ ಸಂಘಟಿಸಲಿದ್ದಾರೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್‌.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2019 ಭಯೋತ್ಪಾದಕರ ದಾಳಿಗೆ 44 ಸಿಆರ್‌ಪಿಎಫ್ ಯೋಧರು ಬಲಿಯಾದ
ಬಲಿದಾನವಾದ ಸೈನಿಕರನ್ನು ಎಲ್ಲರೂ ನೆನಪು ಮಾಡಿಕೊಳ್ಳುವ ಮತ್ತು ಅವರ ಕುಟುಂಬಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ವರ್ಷಂ ಪ್ರತಿ ಫೆ.14 ರಂದು ಪುಲ್ವಾಮ ಹುತಾತ್ಮ ದಿನ ಆಚರಿಸುವಂತೆ ಕೇಂದ್ರ ಸರ್ಕಾರಕ್ಕೆಗೃಹ ಸಚಿವರಿಗೆ ಪತ್ರದ ಮೂಲಕ ಮನವಿ ಮಾಡಿಕೊಳ್ಳಲಿದ್ದೇವೆ ಎಂದರು.

ಪ್ರೇಮಿಗಳ ದಿನ ಬೇಡ: ಪ್ರೇಮಿಗಳ ದಿನಾಚರಣಿ ಮೂಲಕ ಭಾರತದ ಮೇಲೆ ಬಹುದೊಡ್ಡ ಮಟ್ಟದ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿನಡೆಯುತ್ತಿದೆ. ಪ್ರೇಮಿಗಳ ದಿನಾಚರಣೆಗೆ ಬಜರಂಗದಳದ ತೀವ್ರ ವಿರೋಧವಿದೆ. ಈ ಸಂಬಂಧ ಕೊಡುಗೆ ನೀಡುವ ಗ್ರೀಟಿಂಗ್ ಮತ್ತು ವಸ್ತುಗಳನ್ನು ಮಾರಾಟ ಮಾಡದಂತೆ ಅಂಗಡಿ ಮಾಲೀಕರಲ್ಲಿ ಮನವಿ ಮಾಡುವುದಾಗಿ ಹೇಳಿದರು. ಗೋಷ್ಠಿಯಲ್ಲಿ ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ದ.ಕ. ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ ಮತ್ತು ಉಡುಪಿ ಜಿಲ್ಲಾ ಸಂಯೋಜಕ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!