ಡಿಕೆಶಿ ಬಂಧನ ದ್ವೇಷ ರಾಜಕಾರಣಕ್ಕೆ ಹಿಡಿದ ಕನ್ನಡಿ : ಡಾ. ರವಿ ಶೆಟ್ಟಿ ಬೈಂದೂರು

ಉಡುಪಿ : ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಬಂಧನ ಇದು ರಾಜಕೀಯ ಪ್ರೇರಿತವಾಗಿ  ಕಂಡು ಬರುತ್ತಿದ್ದು ಈ ರೀತಿಯ ಸೇಡು ದ್ವೇಷದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾರ್ಮಿಕ ಮುಖಂಡ ಉಡುಪಿ ಜಿಲ್ಲಾ ಜೆಡಿಎಸ್ ಮುಂದಾಳು ಡಾ. ರವಿ ಶೆಟ್ಟಿ ಬೈಂದೂರು ಅಭಿಪ್ರಾಯಪಟ್ಟರು .

ಯಾವೊಬ್ಬ ವ್ಯಕ್ತಿಯಾದರೂ ದೇಶದ ಕಾನೂನಿಗೆ ತಲೆಬಾಗಬೇಕು ನಿಜ . ಅಪರಾಧಿಗೆ ಶಿಕ್ಷೆ. ಆರೋಪಿಯ ವಿಚಾರಣೆ ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ವಿಚಾರಣಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಪಕ್ಷ ಭೇದ ಮತ್ತು ವ್ಯಕ್ತಿ ಭೇದ ಮಾಡಿ ಒಂದು ಪಕ್ಷದವರು ಆಡಳಿತಕ್ಕೆ ಬಂದಾಗ ಇನ್ನೊಂದು ಪಕ್ಷದವರ ವಿರುದ್ಧ ಇನ್ನೊಂದು ಪಕ್ಷದವರು ಬಂದಾಗ ಮತ್ತೊಂದು ಪಕ್ಷದ ವಿರುದ್ಧ ಈ ರೀತಿಯ ಸೇಡಿನ ರಾಜಕಾರಣದ ಸಂಸ್ಕೃತಿಯನ್ನು ನಾವು ವಿರೋಧಿಸುತ್ತೇವೆ ಎಂದರು .

ಇತ್ತೀಚಿನ ದಿನಗಳಲ್ಲಿ ಬಿಜೆಪಿಯೇತರ ಕಾಂಗ್ರೆಸ್ ಜೆಡಿಎಸ್ ಮತ್ತಿತರ ಪಕ್ಷಗಳ ಮುಖಂಡರ ಮನೆಯ ಮೇಲೆ ಐಟಿ ದಾಳಿ ನಡೆಯುತ್ತಿರುವುದು ಈ ಎಲ್ಲ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ . ಮುಂದೆ ಹೀಗೆ ನಡೆದರೆ ಜನರಿಗೆ ಕಾನೂನು ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಹೊರಟು ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು .

Leave a Reply

Your email address will not be published. Required fields are marked *

error: Content is protected !!