ದ.ಕ. ಜಿಲ್ಲೆಯಾದ್ಯಂತ ಪಿಎಫ್ಐ ಗಮನಾರ್ಹ ಸೇವೆ

ಮಂಗಳೂರು: ಕೊರೋನಾ ಸೋಂಕಿನಿಂದ ಎದುರಾದ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಸಜ್ಜಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗಮನಾರ್ಹ ಸೇವೆಯನ್ನ ನೀಡುತ್ತಿದೆ.

ಪಿಎಫ್ಐ ಜಿಲ್ಲಾ ಘಟಕವು ಈಗಾಗಲೇ ಜಿಲ್ಲೆಯಾದ್ಯಂತ 10,641 ಮನೆಗಳಿಗೆ ಅಗತ್ಯ ಸಾಮಗ್ರಿಗಳುಳ್ಳ ಆಹಾರ ಕಿಟ್ ಗಳನ್ನ ತಲುಪಿಸಿವೆ. ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಪಿಎಫ್ಐ ಸಂಘಟನೆಯು ‘ತುರ್ತು ಸೇವಾ ತಂಡ’ ರಚನೆ ಮಾಡಿಕೊಂಡಿದ್ದು ಬಡ ಹಾಗೂ ಮಧ್ಯಮ ವರ್ಗದ ಸರ್ವ ಧರ್ಮೀಯ ಕುಟುಂಬಗಳಿಗೂ ಕಿಟ್ ವಿತರಣೆ.

ರಕ್ತ ಸಂಗ್ರಹಣೆ ಕೊರತೆ ಎದುರಾಗದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯಕರ್ತರಿಂದ 178 ಯೂನಿಟ್ ರಕ್ತ ಸಂಗ್ರಹ, ಕೊರೋನಾ ಸಮಯದಲ್ಲಿ 124 ಮಂದಿಗೆ ರಕ್ತದಾನ, ಗ್ರಾಮೀಣ ಹಾಗೂ ಗಡಿ ಪ್ರದೇಶಗಳಲ್ಲಿ ವಾಸಿಸುವ ಮಂದಿಗೆ ಅಗತ್ಯವಿರುವ ಔಷಧಿಗಳ ಪೂರೈಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಸಂಘಟನೆ ಜಿಲ್ಲೆಯಲ್ಲಿ ಅಗತ್ಯ ಸೇವೆಗೆ ಸನ್ನದ್ಧವಿರುವುದಾಗಿ ಪಿಎಫ್ಐ ಸಂಘಟನೆಯ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ತಿಳಿಸಿದ್ದಾರೆ.

ತಾಲೂಕುವಾರು ‘ರಂಝಾನ್ ಕಿಟ್’ ವಿತರಿಸಿದ ವಿವರ:
ಮಂಗಳೂರು: 2049, ಬೆಳ್ತಂಗಡಿ: 323, ಬಂಟ್ವಾಳ: 3339, ಕಡಬ: 1000, ಪುತ್ತೂರು: 959 ಮುಲ್ಕಿ/ ಮೂಡಬಿದ್ರಿ: 2689, ಸುಳ್ಯ: 255.

Leave a Reply

Your email address will not be published. Required fields are marked *

error: Content is protected !!