ದ.ಕ: ಉಡುಪಿಯ ಇಬ್ಬರಿಗೆ ಕೊರೊನಾ ಪಾಸಿಟಿವ್

ದ.ಕ: ಜಿಲ್ಲೆಯಲ್ಲಿ ಇಂದು ಮತ್ತೆ ಇಬ್ಬರಲ್ಲಿ ಸೋಂಕು ದೃಢ ಪಟ್ಟಿದೆ. ಇವರು ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿಗಳಾಗಿದ್ದು ಫಸ್ಟ್ ‌ನ್ಯೂರೋ ಸಂಪರ್ಕದಿಂದ ಇಬ್ಬರಿಗೆ ಸೋಂಕು ದೃಢವಾಗಿದೆ.

ರೋಗಿ ಸಂಖ್ಯೆ 507 ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಸುಮಾರು 50 ವರ್ಷದ ಮಹಿಳೆಯ ಗಂಟಲು ಪರೀಕ್ಷೆ ವರದಿ ಸ್ವೀಕೃತವಾಗಿದ್ದು ಇವರಿಗೆ ಕೊರೊನಾ ಕಂಡುಬಂದಿದೆ ಹಾಗೂ ಇವರ ಸಂಪರ್ಕದಲ್ಲಿದ್ದು ಸುಮಾರು ಇಪ್ಪತ್ತಾರು ವರ್ಷದ ವ್ಯಕ್ತಿಯ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ.

ಫಸ್ಟ್ ‌ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಇವರನ್ನು ಮಂಗಳೂರಿನಲ್ಲಿ ಕ್ವಾರೆಂಟೈನ್ ಮಾಡಲಾಗಿತ್ತು. ಹೀಗಾಗಿ ಉಡುಪಿ ಮೂಲದವರಾದರೂ ಇವರು ದ.ಕ ಜಿಲ್ಲೆಯ ಕೊರೊನಾ ಪ್ರಕರಣಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಬಾಗಲಕೋಟೆಯಲ್ಲಿ 15, ಹಾಸನದಲ್ಲಿ 5, ಧಾರವಾಡದಲ್ಲಿ 9 ಕೊರೋನಾ ಸೋಂಕಿತ ಪ್ರಕರಣಗಳು ಸೇರಿ ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ ಒಟ್ಟು 42 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಹೊಸದಾಗಿ 42 ಜನರಿಗೆ ಕೊರೋನಾ, ಸೋಂಕಿತರ ಸಂಖ್ಯೆ 904ಕ್ಕೆ ಏರಿಕೆ.

ಬಳ್ಳಾರಿಯಲ್ಲಿ 30 ವರ್ಷದ ವ್ಯಕ್ತಿ, ಚಿಕ್ಕಬಳ್ಳಾಪುರದ 46 ವರ್ಷದ ವ್ಯಕ್ತಿ, ಕಲಬುರಗಿಯ 55 ವರ್ಷದ ವ್ಯಕ್ತಿ, ಯಾದಗಿರಿಗೆ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 33 ವರ್ಷದ ಮಹಿಳೆ ಮತ್ತು 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

ಮುಂಬೈ, ಮಹಾರಾಷ್ಟ್ರಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 28 ವರ್ಷದ ವ್ಯಕ್ತಿ, ಬಾಗಲಕೋಟೆಯಲ್ಲಿ ಅಹಮದಾಬಾದ್ ಗೆ ಪ್ರಯಾಣಬೆಳೆಸಿದ ಹಿನ್ನೆಲೆಯುಳ್ಳ 16, 14 ವರ್ಷದ ಬಾಲಕರು, 33,21,19 ವರ್ಷದ ಯುವಕರು, 19,34 ವರ್ಷದ ವ್ಯಕ್ತಿಗಳು, 30, 17, 32, 20, 18, 29 ವರ್ಷದ ವ್ಯಕ್ತಿಗಳು ಮತ್ತು 80 ವರ್ಷದ ವೃದ್ಧರಿಗೆ ಸೋಂಕು ತಗಲಿದೆ. 

ಅಹಮದಾಬಾದ್ ಗೆ ಪ್ರಯಾಣ ಬೆಳೆಸಿದ ಹಿನ್ನೆಲೆಯುಳ್ಳ 55, 31, 25, 70, 26, 18, 19, 20, 27 ವರ್ಷದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. 

ಬೆಂಗಳೂರು ನಗರದ 38 ವರ್ಷದ ಇಬ್ಬರು ಮಹಿಳೆಯರು, ಬೀದರ್ ನ 23, 30 ವರ್ಷದ ವ್ಯಕ್ತಿಗಳು, ಹಾಸನದ 07 ವರ್ಷದ ಬಾಲಕಿ, 4 ವರ್ಷದ ಬಾಲಕಿ 36 ಮತ್ತು 45 ವರ್ಷದ ಮಹಿಳೆಯರಿಗೆ ಕೂಡ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 

Leave a Reply

Your email address will not be published. Required fields are marked *

error: Content is protected !!