ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ: ಹಾಲಿನ ಖರೀದಿ ದರ ಹೆಚ್ಚಳ
ಉಡುಪಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ
ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 1 ರೂ. ರಂತೆ ಹಾಲಿನ ಖರೀದಿ ದರ ಹೆಚ್ಚಳ ಮಾಡಲು ಒಕ್ಕೂಟದ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ನೀಡುತ್ತಿರುವ ಪ್ರತಿ ಲೀಟರ್ ಗುಣಮಟ್ಟದ ಹಾಲಿಗೆ (ಶೇ.3.5 ಈಂಖಿ ಮತ್ತು ಶೇ.8.5 Sಓಈ) ರೂ.28.67 ಕ್ಕೆ ರೂ.1.00 ಹೆಚ್ಚಿಸಿ ಹಾಲಿನ ಪರಿಷ್ಕøತ ಮೂಲ ಬೆಲೆ ರೂ.29.67 ಆಗುವುದು.
ಇತ್ತೀಚಿನ ದಿನಗಳಲ್ಲಿ ಹಾಲು ಶೇಖರಣೆ ಇಳಿಮುಖವಾಗುತ್ತಿದ್ದು, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವನ್ನು ಗಣನೆಗೆ ತೆಗೆದುಕೊಂಡು ಒಕ್ಕೂಟದ ವ್ಯಾಪ್ತಿಯ ಹೈನುಗಾರರನ್ನು ಉತ್ತೇಜಿಸುವ ಉದ್ದೇಶದಿಂದ ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಲಾಗಿದೆ. ಒಕ್ಕೂಟದ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ರಾಸುಗಳಿಗೆ ವಿಮೆ ಮಾಡಿಸಲು ತೀರ್ಮಾನಿಸಿದ್ದು, ಅದರಂತೆ ಒಕ್ಕೂಟದಿಂದ ಶೇ. 75 ರಷ್ಟು ವಿಮೆ ಮೊತ್ತವನ್ನು ಪಾವತಿ ಮಾಡಲಾಗುವುದು.
ಆದ್ದರಿಂದ ಎಲ್ಲಾ ಹೈನುಗಾರರು ತಮ್ಮ ರಾಸುಗಳಿಗೆ ವಿಮೆ ಮಾಡಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿರುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುವ ಸದಸ್ಯ ರೈತರು ಸದರಿ ಪ್ರಯೋಜನ ಪಡೆದು ಮತ್ತು ಉತ್ತಮ ಗುಣಮಟ್ಟದ ಅಧಿಕ ಹಾಲನ್ನು ಉತ್ಪಾದಿಸಿ ತಮ್ಮ ಸಂಘಕ್ಕೆ ನೀಡುವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.