ದ.ಕ.: ಕೊರೊನಾ ಸೋಂಕಿಗೆ 67 ವರ್ಷದ ಮಹಿಳೆ ಬಲಿ

ಮಂಗಳೂರು: ಕೊರೊನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ಮಹಿಳೆ ಮೃತಪಟ್ಟಿದ್ದಾರೆ. ಎ.21ರಂದು ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ.

ಎ.19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾದ ಮಹಿಳೆಯ ನೆರೆಮನೆ ನಿವಾಸಿಯಾಗಿದ್ದ ವೃದ್ದೆ, ಬಂಟ್ವಾಳ ಕಸಬಾ ಗ್ರಾಮದಲ್ಲೇ ಮೂರು ಬಲಿ ಪಡೆದ ಮಾರಕ ಕೊರೋನಾ.

ರಾಜ್ಯದಲ್ಲಿ ಒಂದೇ ದಿನ 30 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 565ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 22 ಜನರು ಮೃತಪಟ್ಟಿದ್ದು, 229 ಮಂದಿ ಗುಣಮುಖರಾಗಿದ್ದಾರೆ.
 
ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ, ವಿಜಯಪುರದ 62 ವರ್ಷದ ವ್ಯಕ್ತಿ ಮತ್ತು 33 ವರ್ಷದ ಮಹಿಳೆ, ತುಮಕೂರಿನ 65 ವರ್ಷದ ಮಹಿಳೆ, ಬೆಂಗಳೂರು ನಗರದ 20 ಹಾಗೂ 28 ವರ್ಷದ ಯುವಕರು, 63 ವರ್ಷದ ವೃದ್ಧ ಮತ್ತು ದಾವಣಗೆರೆಯ 69 ವರ್ಷದ ವ್ಯಕ್ತಿ ಸೋಂಕಿಗೆ ಗುರಿಯಾಗಿದ್ದಾರೆ. 

ಉಳಿದಂತೆ ಬೆಳಗಾವಿಯ ಹಿರೇಬಾಗೇವಾಡಿಯ 24 ವರ್ಷದ ಇಬ್ಬರು ಮಹಿಳೆಯರು, 27 ವರ್ಷದ ವ್ಯಕ್ತಿ, 18 ವರ್ಷದ ಯುವಕ, 48 ವರ್ಷದ ಮಹಿಳೆ , 50 ವರ್ಷದ ವ್ಯಕ್ತಿ, 27 ವರ್ಷದ ಮಹಿಳೆ, 43, 16, 36 ವರ್ಷದ ವ್ಯಕ್ತಿಗಳು, 8 ವರ್ಷದ ಬಾಲಕ, 36 ವರ್ಷದ ವ್ಯಕ್ತಿ, ಬೆಳಗಾವಿ ಹುಕ್ಕೇರಿಯ 9 ವರ್ಷದ ಬಾಲಕ ಮತ್ತು 75 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ ಹೊಸದಾಗಿ 9 ಪ್ರಕರಣಗಳು ಪತ್ತೆಯಾಗಿದೆ 15 ವರ್ಷದ ಬಾಲಕ, 60 ವರ್ಷದ ವೃದ್ಧೆ, 4 ವರ್ಷದ ಬಾಲಕಿ, 16 ವರ್ಷದ ಯುವತಿ, 13 ವರ್ಷದ ಬಾಲಕಿ,35 ವರ್ಷದ ವ್ಯಕ್ತಿ,ಮತ್ತು 64 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಕಲಬುರಗಿಯಲ್ಲಿ 35 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.

ಬೆಂಗಳೂರು ನಗರ 141 ಸೋಂಕಿತರೊಂದಿಗೆ ಮೊದಲನೇ ಸ್ಥಾನದಲ್ಲಿದೆ. ಮೈಸೂರು 88 ಸಂಖ್ಯೆಯೊಂದಿಗೆ ಎರಡು ಹಾಗೂ ಬೆಳಗಾವಿ 67 ಪ್ರಕರಣಗಳೊಂದಿಗೆ 3ನೇ ಸ್ಥಾನದಲ್ಲಿದೆ.ವಿಜಯಪುರ 43 ಹಾಗೂ ಕಲಬುರಗಿಯಲ್ಲಿ 53 ಪ್ರಕರಣಗಳು ಪತ್ತೆಯಾಗಿವೆ.

Leave a Reply

Your email address will not be published. Required fields are marked *

error: Content is protected !!