ಅರಬ್ ರಾಷ್ಟ್ರದಲ್ಲಿ ಕರಾವಳಿ ಹುಡುಗನ ಡಿಜೆ ಕಮಾಲ್

ಉಡುಪಿ – ಇವರು ವೇದಿಕೆ ಗೆ ಬಂದರೆ ಸಾಕು ಯುವಜನತೆಯ ಹೃದಯ ಬಡಿತ ಹೆಚ್ಚುತ್ತಲೇ ಸಾಗುತ್ತದೆ, ಯುವಜನತೆಯನ್ನ ತಮ್ಮ ಸಂಗೀತದ ಮೋಡಿಯಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡುವ ಈ ಯುವಕನ ಹೆಸರು ಸುಜಯ್, ಆದರೆ ತನ್ನ ಅಭಿಮಾನಿಗಳಿಗೆ ಇವರು ಡಿಜೆ ಸುಜಯ್. ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ತನ್ನ ವಿಭಿನ್ನ ಶೈಲಿಯ ಡಿಜೆ ಷೋಗಳ ಮೂಲಕ ಅಭಿಮಾನಿಗಳನ್ನ ಹೊಂದಿರುವ, ಈ ಚಿಗುರು ಮೀಸೆಯ ಯುವಕನ ಸಂಗೀತದಲ್ಲಿರುವ ಆಸಕ್ತಿ ಇಂದು ಇಷ್ಟು ಎತ್ತರಕ್ಕೆ ಏರುವಂತೆ ಮಾಡಿದೆ. ಇದೀಗ ಇವರ ಸಾಧನೆಗಳ ಕಿರೀಟಕ್ಕೆ ಇನ್ನೊಂದು ಗರಿ ಸೇರ್ಪಡೆಗೊಂಡಿದೆ.

ದುಬೈಯ ಎವರೆಸ್ಟ್ ಕ್ಲಬ್, ಅಲ್ಲಿನ ಭಾರತೀಯರಿಗಾಗಿ ಆಗಸ್ಟ್ 15 ರಂದು 73 ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿ “ಲೈವ್ ಡಿಜೆ ಸುಜಯ್” ಎಂಬ ಡಿಜೆ ಶೋ ಏರ್ಪಡಿಸಿದೆ, ಭಾರತದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ದುಬೈ ಭಾರತೀಯ ನಿವಾಸಿಗಳಿಗಾಗಿ ಈ ಕಾರ್ಯಕ್ರಮವನ್ನು ಎವರೆಸ್ಟ್ ಕ್ಲಬ್ ನವರು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮ ಭಾಗವಹಿಸಲು ಸುಜಯ್ ಆಗಸ್ಟ್ 14 ರಂದು ವಿಮಾನ ಏರಲಿದ್ದಾರೆ ,

 

ಸುಜಯ್ ಸುಮಾರು 13 ವರ್ಷದಿಂದ ದೇಶದಾದ್ಯಂತ ಹಲವು ಕಡೆಗಳಲ್ಲಿ ಡಿಜೆ ಶೋಗಳನ್ನೂ ನೀಡಿ ಯುವಜನತೆಯ ಯೂಥ್ ಐಕಾನ್ ಆಗಿರುವ ಇವರು, ವಿದೇಶದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾರೆ . ದುಬೈ , ಮಾಲ್ಡಿವ್ಸ್ , ಕತಾರ್ ಮುಂತಾದ ದೇಶಗಳಲ್ಲಿ ತನ್ನ ಪ್ರತಿಭೆಯಿಂದ ಲಕ್ಷಾಂತರ ಜನರ ಕೈ ಚಪ್ಪಾಳೆಗಳ ಸದ್ದಿನೊಂದಿಗೆ ಬೆಳೆದವರು. ಇಸ್ರೇಲ್ ನಲ್ಲಿ ಡಿ ಜೆ ಶೋ ಕ್ಲಬ್ ಇವೆಂಟ್ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದ್ದು,. ತನ್ನ ಈ ಹವ್ಯಾಸಕ್ಕೆ ತನ್ನ ಅಣ್ಣನಾದ ವಿಜಯ್ ಯವರ ಪ್ರೋತ್ಸಾಹವೇ ಕಾರಣ ಎನ್ನುತ್ತಾರೆ ಸುಜಯ್…..ವಿದೇಶಗಳಲ್ಲಿ ಇನ್ನಷ್ಟು ಡಿ ಜೆ ಸೌಂಡ್ ಕೇಳುವಂತೆ ಮಾಡಬೇಕು ಹಾಗು ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂಬ ತುಡಿತ ಇವರದ್ದು. ಇವರ ಕನಸು ನನಸಾಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ….

3 thoughts on “ಅರಬ್ ರಾಷ್ಟ್ರದಲ್ಲಿ ಕರಾವಳಿ ಹುಡುಗನ ಡಿಜೆ ಕಮಾಲ್

Leave a Reply to joel George mathias Cancel reply

Your email address will not be published. Required fields are marked *

error: Content is protected !!