ಉಡುಪಿ: ತಕ್ಷಣದಿಂದ ಮುಚ್ಚಿರುವ ಆಸ್ಪತ್ರೆ, ಕ್ಲಿನಿಕ್ ತೆರೆಯುವಂತೆ ವೈದ್ಯರಿಗೆ ಜಿಲ್ಲಾಧಿಕಾರಿ ಆದೇಶ
ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊರೋನಾ ಎಮರ್ಜೆನ್ಸಿ ಯಿಂದಾಗಿ ಅನೇಕ ವೈದ್ಯರು ತಮ್ಮ ಆಸ್ಪತ್ರೆ , ಕ್ಲಿನಿಕ್ ಗಳನ್ನೂ ಮುಚ್ಚಿದ್ದು ಅಂತಹ ವೈದ್ಯರಿಗೆ ಜಿಲ್ಲಾಧಿಕಾರಿ ಕ್ಲಿನಿಕ್ ನ್ನು ಶೀಘ್ರವಾಗಿ ತೆರೆಯುವಂತೆ ಆದೇಶಿಸಿದ್ದಾರೆ.
ಜನರಿಗೆ ಸೇವೆ ನೀಡದೆ ಮುಚ್ಚಿರುವ ಆಸ್ಪತ್ರೆ, ಕ್ಲಿನಿಕ್ ಗಳನ್ನು ತಕ್ಷಣದಿಂದಲೇ ತೆರೆದು ರೋಗಿಗಳಿಗೆ ಸೇವೆ ನೀಡಬೇಕು ,ಇಲ್ಲವಾದಲ್ಲಿ ಸರಕಾರ ನೀಡಿರುವ ಲೈಸನ್ಸ್ ರದ್ದುಗೊಳಿಸಲಾಗುವುದೆಂದು ಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.