ಉಡುಪಿ ಜಿಲ್ಲೆಯಲ್ಲಿ ತಹಸೀಲ್ದಾರ್ ಮೂಲಕ ಪಾಸ್ ವಿತರಣೆ: ಜಿಲ್ಲಾಧಿಕಾರಿ

ಉಡುಪಿ: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಸ್ತುತ ನಿರ್ಬಂಧಾಜ್ಞೆ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಯಾವುದೇ ನಾಗರೀಕರ ಓಡಾಟವನ್ನು ನಿರ್ಬಂಧಿಸಲಾಗಿರುತ್ತದೆ. ಈ ಸಂಬoಧ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ವೈದ್ಯಕೀಯ ನೆಲೆಯಲ್ಲಿ ,ಅವಶ್ಯಕ ವಸ್ತುಗಳನ್ನು ಬೇರೆ ಜಿಲ್ಲೆಗೆ ಸರಬರಾಜು ಮಾಡಲು ಹಾಗೂ ಇತರೆ ಕಾರಣಕ್ಕಾಗಿ ಅಂತರ್ ರಾಜ್ಯ / ಜಿಲ್ಲೆಗಳಿಗೆ ಹೋಗಲು ಅನುಮತಿಗಾಗಿ ಪ್ರತಿದಿನ ಜಿಲ್ಲಾಧಿಕಾರಿಯವರ ಕಛೇರಿಗೆ 50 ರಿಂದ 60 ಜನರು ಬರುತ್ತಿರುತ್ತಾರೆ. ಈ ರೀತಿ ಅನುಮತಿಗಾಗಿ ಸಾರ್ವಜನಿಕರು ನಿರ್ಬಂಧ ಇರುವ ಸಂದರ್ಭದಲ್ಲಿ ಗುಂಪು ಗುಂಪಾಗಿ ಬರುವುದು ನಿರ್ಬಂಧ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ.

ಆದ್ದರಿಂದ ಈ ಕೆಳಗೆ ತಿಳಿಸಿರುವ ವಿಚಾರದ ಬಗ್ಗೆ ಅನುಮತಿಗಾಗಿ ಸಾರ್ವಜನಿಕರು ಅರ್ಜಿಗಳನ್ನು ತಹಶೀಲ್ದಾರರ ಮೂಲಕ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಬೇರೆ ಜಿಲ್ಲೆಗೆ ತೆರಳಿ ಚಿಕಿತ್ಸೆ ಪಡೆಯಲು , ಅಂದರೆ ಈ ಹಿಂದೆ ಸದ್ರಿ ಜಿಲ್ಲೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರೆ ಅದನ್ನು ಮುಂದುವರೆಸಲು ಮಾತ್ರ . ಅಗತ್ಯ ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸುವ ಸಲುವಾಗಿ ಈ ಮೇಲೆ ತಿಳಿಸಿರುವ ಕಾರಣಗಳಿಗಾಗಿ ಅರ್ಜಿದಾರರು ಈ ಕೆಳಗೆ ತಿಳಿಸಿರುವ ಮಾಹಿತಿಯೊಂದಿಗೆ ಅರ್ಜಿಗಳನ್ನು ತಹಶೀಲ್ದಾರರಿಗೆ ಸಲ್ಲಿಸಬಹುದಾಗಿದೆ.


ತುರ್ತು ವೈದ್ಯಕೀಯ ಕಾರಣಗಳಿಂದಾಗಿ ಬೇರೆ ಜಿಲ್ಲೆಗೆ ತೆರಳಲು ಅನುಮತಿ ಕೋರುವವರು ವೈದ್ಯಕೀಯ ದೃಢಪತ್ರದೊಂದಿಗೆ ಅರ್ಜಿ ಸಲ್ಲಿಸುವುದು. ಹಿಂದೆ ಚಿಕಿತ್ಸೆ ಪಡೆದ ಬಗ್ಗೆ ದಾಖಲೆಗಳನ್ನು ಸಲ್ಲಿಸುವುದು. ಅನುಮತಿ ಕೋರುವವರು ಯಾವ ಉದ್ದೇಶಕ್ಕೆ/ಯಾವ ದಿನಾಂಕ/ ಯಾರು ಪ್ರಯಾಣಿಸುತ್ತಾರೆ ಎಂಬ ಬಗ್ಗೆ ಆವಶ್ಯ ಮಾಹಿತಿ ದಾಖಲೆಗಲೊಂದಿಗೆ ಹಾಗೂ ವಾಹನದ ಮಾಹಿತಿಯೊಂದಿಗೆ ಕೋರಿಕೆ ಪತ್ರವನ್ನು ಸಂಬoಧಪಟ್ಟ ತಹಶೀಲ್ದಾರರಿಗೆ ನೀಡತಕ್ಕದ್ದು. (ಗೂಡ್ಸ್ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿಲ್ಲ) ಯಾವ ವಾಹನದಲ್ಲಿ ಪ್ರಯಾಣಿಸುತ್ತಾರೆ ಆ ವಾಹನದ ದಾಖಲೆಗಳ ಪ್ರತಿ
ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ತಹಶೀಲ್ದಾರರು ಪರಿಶೀಲನೆ ನಡೆಸಿ ಸರಿಯಾದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ಪರಿಶೀಲಿಸುವುದು ಮೇಲೆ ತಿಳಿಸಿದ ತುರ್ತು ವೈದ್ಯಕೀಯ ಹಾಗೂ ತುರ್ತು ಅಗತ್ಯ ಕರ್ತವ್ಯಕ್ಕೆ ಹಾಜರಗಲು
ಕೋರಿರುವುದು ಸಮಂಜಸವಾಗಿದೆ ಎಂದು ಮನವರಿಕೆಯಾದಲ್ಲಿ ಹಾಗೂ ಅನುಮತಿ ನೀಡುವುದು ಅಗತ್ಯವೆಂದು ಕಂಡು ಬಂದಲ್ಲಿ ಆನ್ಲೈನ್ ನಲ್ಲಿ ಜಿಲ್ಲಾಧಿಕಾರಿಯವರ ಕಛೇರಿಗೆ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಲ್ಲಿ ಈ ಅರ್ಜಿಗಳನ್ನು ಪರಿಶೀಲನೆ ನಡೆಸಿ ಇ- ಪಾಸ್ ಮೂಲಕ ಅನುಮತಿಯನ್ನು ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.


ಆದ್ದರಿಂದ ಇನ್ನು ಮುಂದೆ ಸಾರ್ವಜನಿಕರು ಜಿಲ್ಲಾಧಿಕಾರಿಯವರ ಕಛೇರಿಗೆ ಬಾರದೆ ನೇರವಾಗಿ ಸಂಬoಧಪಟ್ಟ ತಹಶೀಲ್ದಾರರ ಕಛೇರಿಯಲ್ಲಿ ಬೆಳಿಗ್ಗೆ 10 ರಿಂದ 12 ವರೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಿ ಅನುಮತಿಯನ್ನು ಇ-ಪಾಸ್ ಮೂಲಕ ಪಡೆಯ ಬಹುದಾಗಿದೆ ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರು ಅನುಮತಿಗಾಗಿ ಯಾವುದೇ ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!