ಶ್ರೀ ಅಘೋರೇಶ್ವರ ಕಲಾರಂಗ, ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕಿಟ್ ವಿತರಣೆ.
ಕೋಟ: ಸದಾ ಸಮಾಜಿಕ ಕಳಕಳಿಯನ್ನು ಹೊಂದಿರುವ ಎರಡು ಸಂಸ್ಥೆಗಳಾದ ಶ್ರೀ ಅಘೋರೇಶ್ವರ ಕಲಾರಂಗ ಮತ್ತು ಕಿದಿಯೂರು ಉದಯಕುಮಾರ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಪ್ರಸ್ತುತ ಲಾಕ್‌ಡೌನ್ ಸನ್ನಿವೇಶದಲ್ಲಿ ಸಾಸ್ತಾನ, ಸಾಲಿಗ್ರಾಮ, ಕೋಟ ಪರಿಸರದ ಅಶಕ್ತ ಕುಟುಂಬಗಳಿಗೆ ತಮ್ಮ ದೈನಂದಿನ ಜೀವನ ನಿರ್ವಹಣೆಗಾಗಿ ಸುಮಾರು ಐವತ್ತುಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್‌ನ್ನು ನೀಡಲಾಯಿತು. ಈ ದ್ವಿತೀಯ ಹಂತದ ಕಾರ್ಯಕ್ರಮದಲ್ಲಿ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯಸ್ಥರಾದ ಕಿದಿಯೂರು ಉದಯಕುಮಾರ್ ಶೆಟ್ಟಿ ದಿನಸಿ ಕಿಟ್‌ನ್ನು ಅಶಕ್ತ ಕುಟುಂಬಗಳಿಗೆ ಹಸ್ತಾಂತರಿಸಿದರು. ಶ್ರೀ ಅಘೋರೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಚಂದ್ರಶೇಖರ ಕಾರಂತ, ಕಲಾರಂಗದ ಅಧ್ಯಕ್ಷ ರಾಘವೇಂದ್ರ ನಾರಿ, ನಿವೃತ್ತ ಇಂಜಿನಿಯರ್ ಮಂಜುನಾಥ ನಾರಿ ಮತ್ತು ಕಲಾರಂಗದ ಸರ್ವಸದಸ್ಯರು ಉಪಸ್ಥಿತರಿದ್ದರು.
ಸಮಾಜಸೇವೆಯನ್ನ ಮೂಲಧ್ಯೇಯವಾಗಿಸಿರುವ ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಲಾಕ್‌ಡೌನ್ ಸಂದರ್ಭದಲ್ಲಿ ಸತತವಾಗಿ ಅಶಕ್ತ ಕುಟುಂಬಗಳಿಗೆ ದಿನಸಿ ಕಿಟ್‌ನ್ನು ನೀಡಿರುವುದಲ್ಲದೇ ಉಡುಪಿ ಪರಿಸರದ ಆಟೋ ಚಾಲಕ ಕುಟುಂಬಗಳಿಗೆ ಸಹಾಯ ಹಸ್ತ ಹಾಗೂ ಅವರಿಗೆ ಆಹಾರ ಸಾಮಗ್ರಿಗಳ ವಿತರಣೆ ನೀಡಿರುವುದಲ್ಲದೆ, ನಿರ್ಗತಿಕರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಅನ್ನದಾಸೋಹವನ್ನು ನೀಡುತ್ತ ಬಂದಿದ್ದು ಸತತ 38 ದಿನಗಳಿಂದ ಸಮಾಜಮುಖಿ ಕಾರ್ಯಕ್ರಮಗಳಿಂದ ಸೈ ಎನಿಸಿಕೊಂಡಿದ್ದಾರೆ.
ಶ್ರೀ ಅಘೋರೇಶ್ವರ ಕಲಾರಂಗ (ರಿ.), ಕಾರ್ತಟ್ಟು-ಚಿತ್ರಪಾಡಿ ಕ್ರೀಯಾಶೀಲ ಸಂಸ್ಥೆಯಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಬಂಜರು ಭೂಮಿಯಲ್ಲಿ ತಾವೆ ಉತ್ತಿ-ಬಿತ್ತಿ ಬೆಳೆದ ಅಕ್ಕಿಯನ್ನು ಪ್ರತಿ ಬಾರಿಯಂತೆ ಈ ಬಾರಿಯು ಸುಮಾರು 300 ಕೆ.ಜಿ. ಅಕ್ಕಿಯನ್ನು ಹೊಸಬೆಳಕು ಸೇವಾ ಟ್ರಸ್ಟ್ ಉಡುಪಿ ವೃದ್ಧಾಶ್ರಮಕ್ಕೆ ನೀಡಿದ್ದು, ಜೆ.ಸಿ. ದಿನೇಶ್ ಬಾಂಧ್ಯವ್ಯರವರ ವಲಸೆ ಕಾರ್ಮಿಕರಿಗೆ ಅನ್ನದಾನ ಕಾರ್ಯಕ್ರಮದಲ್ಲಿ ಆಹಾರ ಸಾಮಗ್ರಿಗಳನ್ನು ನೀಡಿರುವುದಲ್ಲದೇ, ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ ಇವರಿಗೂ ಅಕ್ಕಿ ಮತ್ತು ತರಕಾರಿ ವಿತರಿಸಿರುತ್ತಾರೆ. ಸ್ಥಳೀಯ ಬಡ ಕುಟುಂಬಗಳಿಗೆ ನೆರವಾಗಲು ತಮ್ಮ ಸದಸ್ಯರ ಸಹಾಯದಿಂದ ಪ್ರಥಮ ಹಂತದಲ್ಲಿ ಸುಮಾರು 45 ಕ್ಕೂ ಹೆಚ್ಚು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಿ ಜನ ಮೆಚ್ಚುವ ಸಂಸ್ಥೆಯಾಗಿ ಮೂಡಿಬಂದಿರುತ್ತದೆ.