ವಿವಾದಕ್ಕೆ ಎಡೆ ಮಾಡಿದ ಆಹಾರ ಪೊಟ್ಟಣಗಳ ವಿತರಣೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಕಾರ್ಕಳ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ೨೧ದಿನಗಳ ಭಾರತ್ ಬಂದ್ ನಡುವೆಯೇ ಶುಕ್ರವಾರ ಮಧ್ಯಾಹ್ನ ಮುಸ್ಲಿಂ ಸಮುದಾಯಕ್ಕೆ ಸೇರಿದ ಕೆಲ ಯುವಕರು ಹೆಬ್ರಿ, ಹೊಸ್ಮಾರು ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಮಾರುತಿ ಓಮ್ನಿಯಲ್ಲಿ ಬಿರಿಯಾನಿ ಪ್ಯಾಕೆಟ್ ಹಾಗೂ ನೀರಿನ ಬಾಟಲ್‌ಗಳನ್ನು ವಿತರಿಸುತ್ತಿದ್ದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.
ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿನ ಕೆಲ ಮುಸ್ಲಿಂ ಯುವಕರು ಮಾರುತಿ ಓಮ್ನಿಯಲ್ಲಿ ಬಿರಿಯಾನಿ ಪ್ಯಾಕೆಟ್‌ಗಳನ್ನು ತುಂಬಿಸಿಕೊಂಡು ಹೆಬ್ರಿ ಸಮೀಪದ ಸೀತಾನದಿ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ದಾರಿಯಲ್ಲಿ ಹೋಗುವ ಜನರಿಗೆ ಉಚಿತವಾಗಿ ಬಿರಿಯಾನಿ ಪೊಟ್ಟಣ ಹಾಗೂ ನೀರಿನ ಬಾಟಲಿಗಳನ್ನು ಹಂಚುತ್ತಿರುವ ಸುದ್ಧಿ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತ ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧಾಕರ ಅವರ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ನೀವು ಬಿರಿಯಾನಿ ವಿತರಿಸಲು ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದಾಗ, ನಾವು ಬಡವರಿಗೆ ಆಹಾರ ವಿತರಿಸುತ್ತಿರುವುದು ಇದರಿಂದ ಅವರಿಗೆ ಸಹಾಯವಾಗುತ್ತದೆ ಎಂದು ಬಿರಿಯಾನಿ ಹಂಚುತ್ತಿದ್ದ ಯುವಕರು ಸ್ಪಷ್ಟನೆ ನೀಡಿದ್ದಾರೆ. ಆದರೆ ಆಹಾರದ ಪೊಟ್ಟಣ,ದಿನಸಿ ಸಾಮಾಗ್ರಿಗಳನ್ನು ಖಾಸಗಿ ವ್ಯಕ್ತಿಗಳು ವಿತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ, ಅವುಗಳನ್ನು ತಾಲೂಕು ಆಡಳಿತದ ಮೂಲಕ ಮಾತ್ರ ವಿತರಿಸಬೇಕೆಂದು ತಾಲೂಕು ಆಡಳಿತ ಸ್ಪಷ್ಟಪಡಿಸಿದೆ.
ಬಿರಿಯಾನಿ ಹಂಚುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ನಾಗರಿಕರು !
ಕಾರ್ಕಳದ ಯುವಕರು ಏಕಾಎಕಿ ಯಾರ ಅನುಮತಿಯನ್ನೂ ಪಡೆಯದೇ ತೀರಾ ಗ್ರಾಮೀಣ ಪ್ರದೇಶದಲ್ಲಿ ವಾಹನ ನಿಲ್ಲಿನ ಬಿರಿಯಾನಿ ಹಂಚುತ್ತಿರುವ ಕುರಿತು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳು ಮೂಡಿವೆ. ಈಗಾಗಲೇ ಜನರು ಕೊರೊನಾ ಖಾಯಿಲೆಯಿಂದ ಬೆಚ್ಚಿಬಿದ್ದಿದ್ದು,ಯುವಕರು ಉಚಿತವಾಗಿ ವಿತರಿಸಿದ ಆಹಾರ ಪೊಟ್ಟಣದ ಬಗ್ಗೆಯೂ ಜನರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಘಟನೆಯ ಕುರಿತು ಪೊಲೀಸರಲ್ಲೇ ಗೊಂದಲ: ಪ್ರಕರಣದ ಕುರಿತು ಮಾಹಿತಿಯೇ ಇಲ್ಲವೆಂದ ಹೆಬ್ರಿ ಎಸ್‌ಐ
ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೀತಾನದಿ ಕೈಕಂಬ ಎಂಬಲ್ಲಿ ಮಾರುತಿ ಓಮ್ನಿಯಲ್ಲಿ ನಿಯಮಬಾಹಿರವಾಗಿ ಆಹಾರ ಪೊಟ್ಟಗಳನ್ನು ವಿತರಿಸುತ್ತಿರುವ ಬಗ್ಗೆ ಹೆಬ್ರಿ ಠಾಣೆಯ ಎಸ್‌ಐ ಸುಮಾ ಅವರಿಗೆ ಮಾಹಿತಿಯೇ ಬಂದಿಲ್ಲವೆಂದು ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅವರು ಕಾರ್ಕಳದವರಾಗಿದ್ದು ಕಾರ್ಕಳದಿಂದ ಪರವಾನಿಗೆ ಪಡೆದಿರಬಹುದೆಂದು ಕಾಗೆ ಹಾರಿಸುವ ಪ್ರಯತ್ನ ಮಾಡಿ ಪೇಚಿಗೆ ಸಿಲುಕಿದ್ದಾರೆ.ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಘಟನೆಯ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ನಮ್ಮಲ್ಲಿ ಯಾವುದೇ ಅನುಮತಿ ಪತ್ರ ನೀಡಿಲ್ಲ ಅಲ್ಲದೇ ಯಾರೂ ಕೂಡ ಖಾಸಗಿಯಾಗಿ ಆಹಾರ ವಿತರಿಸಲು ಅವಕಾಶವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.ಈ ಘಟನೆಯ ಕುರಿತು ಹೆಬ್ರಿ ತಹಶೀಲ್ದಾರ್ ಮಹೇಶ್‌ಚಂದ್ರ ಅವರು ಮಾಹಿತಿ ಪಡೆದುಕೊಂಡಿದ್ದಾರೆ.