ಕೊರೋನಾ ಮುಕ್ತ ಜಿಲ್ಲೆಯಾದ ಉಡುಪಿ, ಗರ್ಭಿಣಿ ಆಸ್ಪತ್ರೆಯಿಂದ ಡಿಸ್ ಚಾರ್ಜ್
ಉಡುಪಿ: ಜಿಲ್ಲೆಯವರಿಗೆ ಸಿಹಿಸುದ್ದಿ, ಇದೀಗ ಉಡುಪಿ ಜಿಲ್ಲೆ ಸಂಪೂರ್ಣ ಕೊರೋನಾ ಸೋಂಕು ಮುಕ್ತ ಜಿಲ್ಲೆ , ಕೊರೋನಾ ಸೋಂಕು ತಗುಲಿದ್ದ ಗರ್ಭಿಣಿ ಮಹಿಳೆ ಗುಣಮುಖರಾಗಿದ್ದು ಚಿಕಿತ್ಸೆ ಮುಗಿಸಿ ಇವತ್ತು ಡಿಸ್ ಚಾರ್ಜ್ ಆಗಿದ್ದರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಗರ್ಭಿಣಿ ಮಹಿಳೆಗೆ ಕೆಲವು ದಿನಗಳ ಹಿಂದೆ ಕೊರೋನಾ ವೈರಸ್ಸ್ ಸೋಂಕು ತಗುಲಿದ್ದು ಮಾನವೀಯತೆ ನೆಲೆಯಲ್ಲಿ ಉಡುಪಿಯ ಡಾ.ಟಿ.ಎಂ.ಎ.ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಗರ್ಭಿಣಿ ಮಹಿಳೆ ಇದೀಗ ಗುಣಮುಖ ಗೊಂಡ ಹಿನ್ನೆಲೆಯಲ್ಲಿ ಇವತ್ತು ಡಿಸ್ ಚಾರ್ಜ್ ಮಾಡಲಾಯಿತು. ಈ ಮೊದಲು ಕೊರೋನಾ ಸೋಂಕು ತಗುಲಿದ್ದ ಮೂವರು ಗುಣಮುಖರಾಗಿ ಡಿಸ್ ಚಾರ್ಜ್ ಆಗಿದ್ದರು ಹಾಗಾಗಿ ಇದೀಗ ಉಡುಪಿ ಜಿಲ್ಲೆ ಕೋರೋನಾ ಮುಕ್ತ ಜಿಲ್ಲೆಯಾಗಿದೆ.