ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ದೆಂದೂರುಕಟ್ಟೆ ನಿವಾಸಿ ಆಸ್ಪತ್ರೆಯಿಂದ ಡಿಸ್‌ಚಾರ್ಜ್
ಉಡುಪಿ: (ಉಡುಪಿ ಟೈಮ್ಸ್ ವರದಿ) ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ದೆಂದೂರುಕಟ್ಟೆ ನಿವಾಸಿ ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖವಾಗಿ ಮಂಗಳವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿದ್ದಾನೆ.
ಮಾರ್ಚ್ 17ರಂದು ದುಬೈನಿಂದ ಬಂದಿದ್ದ ಈತನನ್ನು ಹೋಂ ಕ್ವಾರಂಟೈನ್‌ಗೆ ಆದೇಶಿಸಿದ್ದರೂ ಉಲ್ಲಂಘಿಸಿ ತನ್ನೂರಿನಲ್ಲಿ ಕ್ರಿಕೆಟ್, ಬಾರ್‌ನಲ್ಲಿ ಪಾರ್ಟಿ, ಕೋಳಿ ಅಂಕ ,ಈಜಾಡಲು ಹೋಗಿ ಇಡೀ ಊರೇ ಬೆಚ್ಚಿಬೀಳಿಸುವಂತೆ ಮಾಡಿದ್ದ,ಇತನ ವಿರುದ್ದ ೪೦ ಕ್ಕೂ ಹೆಚ್ಚೂ ಜನರಿಗೆ ಸೋಂಕು ಹರಡಿಸಿರುವ ಬಗ್ಗೆ ದೂರು ಕೂಡ ದಾಖಲಾಗಿತ.
ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇತನಿಗೆ ಎರಡು ಬಾರಿಯ ರಕ್ತ ಪರೀಕ್ಷೆ ಮಾಡಿದ್ದು,ಅದರಲ್ಲಿ ಕೊರೋನಾ ಸೋಂಕು ನೆಗೆಟಿವ್ ಬಂದಿದ್ದರಿಂದ, ಇಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿದೆ. ಆದರೂ ೧೪ ದಿನ ಹೋಂ ಕ್ವಾರೆಂಟೆನ್‌ನಲ್ಲಿ ಇರುವಂತೆ ವೈದ್ಯರು ತಿಳಿಸಿದ್ದಾರೆ.
Good publisher