ದೇಶದಲ್ಲಿ ಸತ್ಯ ಹೇಳಿದರೇ ದೇಶ ದ್ರೋಹಿ: ಶ್ಯಾಮರಾಜ್ ಬಿರ್ತಿ
ಉಡುಪಿ : ಹೆಬ್ರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಹೆಬ್ರಿ ತಾಲೂಕು ಶಾಖೆ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಹಾಗೂ ದಲಿತ ಸಮಾವೇಶ
ನಡೆಯಿತು. ದಲಿತ ಸಮಾವೇಶವನ್ನು ಜಿಲ್ಲಾ ಪ್ರಧಾನ ಸಂಚಾಲಕ ಶ್ರೀ.ಸುಂದರ ಮಾಸ್ತರ್ ರವರು ದೀಪ ಬೆಳಗುವುದರ ಮೂಲಕ ಉಧ್ಘಾಟಿಸಿದರು.
ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಜಿಲ್ಲಾ ಮುಖಂಡ ಶ್ಯಾಮರಾಜ್ ಬಿರ್ತಿ ಈ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ , ” ಈ ದೇಶದಲ್ಲಿ ಸತ್ಯ ಹೇಳಿದರೆ ದೇಶ ದ್ರೋಹಿಗಳು “, ದೇಶದ ಆರ್ಥಿಕ ಸ್ಥಿತಿ ನೆಲಕಚ್ಚಿ ಹೋಗಿದ್ದರೂ ದೇಶ ಪ್ರಕಾಶಿಸುತ್ತಿದೇ ಎನ್ನಲಾಗುತ್ತಿದೆ. ಈ ದೇಶದಲ್ಲಿ ಕೋಮುವಾದಿಗಳು, ಮನುವಾದಿ ಆಡಳಿತವನ್ನು ನೆಲೆಗೊಳಿಸಲು ಅಡ್ಡಗಾಲಾಗಿರುವ ದಲಿತರು ಮತ್ತು ಮುಸ್ಲಿಮರನ್ನು ಮುಗಿಸಿಬಿಡುವ ಹುನ್ನಾರ ನಡೆಸುತಿದ್ದಾರೆ. ಈಗ ಈ ದೇಶದಲ್ಲಿ ಸಂವಿಧಾನವನ್ನು ಗೌಣವಾಗಿಸುವ ತಂತ್ರ ನಡೆಯುತ್ತಿದೆ . ಶಾಸಕಾಂಗವೇ ನ್ಯಾಯಾಂಗವನ್ನು ನಿಯಂತ್ರಿಸುತ್ತಿದೆಯೋ ಎನ್ನುವ ಅನುಮಾನ ಮೂಡುತ್ತದೆ ಎಂದರು.
ಸುಂದರ ಮಾಸ್ತರ್ ಮಾತನಾಡಿ ಕರ್ನಾಟಕದಲ್ಲಿ ಬುಧ್ಧಿಗೇಡಿಗಳು ಶಾಲಾ ಮಕ್ಕಳಿಗೆ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಲ್ಲಾ ಎನ್ನುವ ಕೈಪಿಡಿ ಬಿಡುಗಡೆಮಾಡುವ ಮೂಲಕ ಅಂಬೇಡ್ಕರ್ ರವರಿಗೆ ಅವಮಾನ ಮಾಡುತಿದ್ದಾರೆ ಎಂದರು.
ಹೆಬ್ರಿ ತಾಲೂಕು ಪ್ರಧಾನ ಸಂಚಾಲಕರಾಗಿ ದೇವು ಕನ್ಯಾನ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಎಲ್ಲಾ ಪದಾಧಿಕಾರಿಗಳಿಗೂ ಪ್ರಮಾಣವಚನ ಬೋಧಿಸಲಾಯಿತು.
ಸಮಾವೇಶದಲ್ಲಿ ಶ್ರೀ.ಪರಮೇಶ್ವರ್ ಉಪ್ಪೂರು , ಶ್ರೀ. ಲೋಕೇಶ ಕಂಚಿನಡ್ಕ , ಭಾಸ್ಕರ್ ಮಾಸ್ತರ್ , ರಾಘವೇಂದ್ರ , ಅಣ್ಣಪ್ಪ ನಕ್ರೆ , ಅಪ್ಪು ಹೆಬ್ರಿ , ಅಣ್ಣಪ್ಪ ಮುದ್ರಾಡಿ , ಶಂಕರ್ ದಾಸ್ ಚೆಂಡ್ಕಳ , ಜಯರಾಮ ಮುದ್ರಾಡಿ ಮುಂತಾದವರು ಹಾಜರಿದ್ದರು.