ಧೋನಿಗೆ ಗೌರವಯುತ ವಿದಾಯ ಸಿಗಲಿ : ಅನಿಲ್ ಕುಂಬ್ಳೆ
ಮುಂಬೈ: ಭಾರತೀಯ ಕ್ರಿಕೆಟ್ ಗಾಗಿ ಎಷ್ಟೇ ಕೊಡುಗೆ ನೀಡಿದ್ದರೂ ಗೌರವಯುತವಾಗಿ ವಿದಾಯ ಸಿಗುವ ಭಾಗ್ಯ ಸಿಕ್ಕಿರುವುದು ಕೆಲವೇ ಕ್ರಿಕೆಟಿಗರಿಗೆ ಮಾತ್ರವೇ. ಧೋನಿಗೂ ಇದೇ ಗತಿ ಬಾರದಿರಲಿ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.
ಇತ್ತೀಚೆಗೆ ಧೋನಿ ನಿವೃತ್ತಿ ಬಗ್ಗೆ ಕೇಳಿಬರುತ್ತಿರುವ ಒತ್ತಾಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಕುಂಬ್ಳೆ ‘ಬಿಸಿಸಿಐ ಧೋನಿ ಜತೆಗೆ ಕೂತು ಈ ಬಗ್ಗೆ ಮಾತನಾಡಬೇಕು. ಒಂದು ವೇಳೆ ಅವರು ಮುಂಬರುವ ಟಿ20 ವಿಶ್ವಕಪ್ ನಲ್ಲಿ ಆಡುವುದಿದ್ದರೆ ಅವರಿಗೆ ಈಗ ಹೆಚ್ಚು ಟಿ20 ಪಂದ್ಯಗಳನ್ನಾಡಲು ಅವಕಾಶ ಕೊಡಬೇಕು’ ಎಂದು ಕುಂಬ್ಳೆ ಅಭಿಪ್ರಾಪಟ್ಟಿದ್ದಾರೆ.
ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಜುಲೈನಲ್ಲಿ ಐಸಿಸಿ ವಿಶ್ವಕಪ್ ಮುಗಿದ ನಂತರ, ಧೋನಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಮುಂದಿನ ವರ್ಷ ನಡೆಯುವ ಟಿ-20 ವಿಶ್ವಕಪ್ನಲ್ಲಿ ಧೋನಿ ಆಯ್ಕೆಯ ಬಗ್ಗೆ ಕುಂಬ್ಳೆ ಅನುಮಾನ ವ್ಯಕ್ತಪಡಿಸಿದ್ದಾರೆ. ಧೋನಿ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ -20 ತಂಡದಲ್ಲಿ ಸ್ಥಾನ ಪಡೆದಿಲ್ಲ.
ಧೋನಿ ಅವರು ಕ್ರಿಕೆಟ್ ನಲ್ಲಿ ಮುಂದುವರೆಯಲು ಅರ್ಹರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ನಿವೃತ್ತಿ ಹೊಂದಲು ನಿರ್ಧರಿಸಿದಾಗ ಅವರಿಗೆ ಗೌರವಯುತ ವಿದಾಯ ಹೇಳಬೇಕು” ಎಂದು ಕುಂಬ್ಳೆ ಹೇಳಿದ್ದಾರೆ.