ಗೋವು ಕಳ್ಳತನ ಮುಂದುವರಿಸಿದರೆ ಗಡಿಪಾರು ಎಚ್ಚರಿಕೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ದಾಖಲಾದ ಗೋಕಳ್ಳತನ ಹಾಗೂ ಅಕ್ರಮ ಗೋಸಾಟ ಪ್ರಕರಣಗಳಲ್ಲಿ ಭಾಗಿಯಾದ್ದವರ ಪೆರೆಡ್ ಇಂದು ನಡೆಸಲಾಯಿತು. ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಗಡಿಪಾರು ಅಥವಾ ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಕುಂದಾಪುರ ಉಪವಿಭಾಗದ ಪರೇಡನ್ನು ಕುಂದಾಪುರದ ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಾದ ನಿಶಾ ಜೇಮ್ಸ್, ಕುಂದಾಪುರ ಪೊಲೀಸ್ ಉಪವಿಭಾಗದಿಕಾರಿ ಬಿ.ಪಿ. ದಿನೇಶ್ ಕುಮಾರ್ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಈ ಪರೇಡ್‌ನಲ್ಲಿ ಉಪವಿಭಾಗದ ಠಾಣೆಗಳಾದ ಕುಂದಾಪುರದಿಂದ 15 ಜನ, ಕುಂದಾಪುರ ಗ್ರಾಮಾಂತರದಿಂದ 14 ಜನ, ಬೈಂದೂರಿನಿಂದ 6 ಜನ, ಶಂಕರನಾರಾಯಣದಿಂದ 5 ಜನ, ಕೊಲ್ಲೂರು ಮತ್ತು ಗಂಗೊಳ್ಳಿಯಿಂದ ತಲಾ 4 ಜನ ಹಾಗೂ ಅಮಾಸೆಬೈಲು ಠಾಣಾ ವ್ಯಾಪ್ತಿಯಿಂದ ಇಬ್ಬರು ಒಟ್ಟು 50 ಜನ ಭಾಗವಹಿಸಿರುತ್ತಾರೆ.

ಉಡುಪಿ ಉಪವಿಭಾಗದ ಪರೇಡನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ.ಆರ್.ಜೈಶಂಕರ್‌ರವರ ನೇತೃತ್ವದಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ, ಉಡುಪಿರವರ ಕಛೇರಿ ಆವರಣದಲ್ಲಿ ನಡೆಸಲಾಯಿತು. ಸದ್ರಿ ಪರೇಡ್‌ನಲ್ಲಿ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಸದ್ರಿ ಪರೇಡ್‌ನಲ್ಲಿ ಕೋಟಾ ಠಾಣೆಯಿಂದ 11 ಜನ, ಹಿರಿಯಡ್ಕ ಠಾಣೆಯಿಂದ 10 ಜನ, ಮಲ್ಪೆ ಠಾಣೆಯಿಂದ 7 ಜನ ಹಾಗೂ ಬ್ರಹ್ಮಾವರ ಠಾಣಾ ಸರಹದ್ದಿನಿಂದ 4 ಜನ ಒಟ್ಟು 32 ಜನ ಭಾಗವಹಿಸಿರುತ್ತಾರೆ.

ಕಾರ್ಕಳ ಉಪವಿಭಾಗದ ಪರೇಡನ್ನು ಕಾರ್ಕಳ ಪೊಲೀಸ್ ಉಪವಿಭಾಗ ಕಛೇರಿಯ ಮುಂಭಾಗದಲ್ಲಿ ನಡೆಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರ, ಕಾರ್ಕಳ ಪೊಲೀಸ್ ಉಪವಿಭಾಗಾಧಿಕಾರಿ ಪಿ. ಕೃಷ್ಣಕಾಂತ್ ಮತ್ತು ಕಾರ್ಕಳ ಉಪವಿಭಾಗದ ಪೊಲೀಸ್ ಅಧಿಕಾರಿಯವರು ಭಾಗವಹಿಸಿದ್ದರು. ಈ ಪರೇಡ್‌ನಲ್ಲಿ ಉಪವಿಭಾಗದ ಠಾಣೆಗಳಾದ ಕಾರ್ಕಳ ನಗರದಿಂದ 7 ಜನ, ಕಾರ್ಕಳ ಗ್ರಾಮಾಂತರದಿಂದ 14 ಜನ, ಹೆಬ್ರಿಯಿಂದ 15 ಜನ, ಅಜೆಕಾರಿನಿಂದ 8 ಜನ, ಕಾಪುವಿನಿಂದ 9 ಜನ, ಪಡುಬಿದ್ರಿಯಿಂದ 10 ಜನ ಹಾಗೂ ಶಿರ್ವಾ ಠಾಣಾ ವ್ಯಾಪ್ತಿಯಿಂದ 12 ಜನ ಒಟ್ಟು 75 ಜನ ಭಾಗವಹಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!