ಮೊಗ್ರಾಲ್ ಯುವತಿ ಮೇಲೆ ಅತ್ಯಾಚಾರ – ನಯನಾ ಗಣೇಶ್ ಖಂಡನೆ
ಉಡುಪಿ- ದಕ್ಷಿಣಕನ್ನಡ ಜಿಲ್ಲೆಯ ಕೇರಳ ಗಡಿ ಪ್ರದೇಶ ಮೊಗ್ರಾಲ್ ಪುತ್ತೂರಿನ ಯುವತಿ ಮೇಲೆ ಸ್ನೇಹದ ಹೆಸರಿನಲ್ಲಿ ಅತ್ಯಾಚಾರ ನಡೆಸಿರುವ ತಪ್ಪಿಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.ಗಡಿ ಪ್ರದೇಶ ಕೇರಳದಲ್ಲಿ ಯುವತಿಯರಿಗೆ ರಕ್ಷಣೆಯಿಲ್ಲದಂತಾಗಿದ್ದು ಪಾನೀಯ ದಲ್ಲಿ ಮತ್ತು ಭರಿಸಿ ಅತ್ಯಾಚಾರ ನಡೆಸಿ ಇಸ್ಲಾಂ ಗೆ ಮತಾಂತರಗೊಳಿಸುವಂತೆ ತಾಲಿಬಾನಿ ಮಾದರಿಯ ಹೇಯ ಕೃತ್ಯವನ್ನು ಮಹಿಳಾ ಮೋರ್ಚಾ ಸಹಿಸುವುದಿಲ್ಲ,
ನ್ಯಾಯಕ್ಕಾಗಿ ಕೇರಳ ಪೊಲೀಸ್ ಬಳಿ ಹೋದಾಗ ಯಾವುದೇ ಕ್ರಮಕೈಗೊಳ್ಳದ್ದಿರುವುದನ್ನು ಖಂಡಿಸುತ್ತೇವೆ,ಅತ್ಯಾಚಾರ ನಡೆಸಿದ ಆರೋಪಿಗಳು ಬೆಂಗಳೂರಿನಲ್ಲಿರುವುದರಿಂದ ,ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಯುವತಿಗೆ ಸೂಕ್ತ ನ್ಯಾಯ,ರಕ್ಷಣೆ ಯನ್ನು ದೊರಕಿಸಿಕೊಡಬೇಕೆಂದು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ