ಈಡೇರದ ಬಸ್ ಮಾಲಕರ ಬೇಡಿಕೆ: ಬುಧವಾರ ಸಿಟಿ ಬಸ್ ರಸ್ತೆಗಿಳಿಯಲ್ಲ

ಉಡುಪಿ: ಜಿಲ್ಲಾಧಿಕಾರಿಗಳು ಬುಧವಾರದಿಂದ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡಿದರೂ ಸದ್ಯ ಖಾಸಗಿ ಬಸ್ ಗಳು ರಸ್ತೆಗಿಳಿಯುವುದು ಬಹುತೇಕ ಕಷ್ಟವೆಂದು ಬಸ್ ಮಾಲಕರ ನಿರ್ಧಾರದಿಂದ ತಿಳಿದು ಬರುತ್ತದೆ.


ಕೊರೋನಾ ಲಾಕ್‌ಡೌನ್ ನಿಂದ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬಸ್‌ನಲ್ಲಿ ನಿಯಮದ ಅರ್ಧಕ್ಕಿಂತ ಹೆಚ್ಚು ಜನರನ್ನು ಹಾಕುವಂತಿಲ್ಲ. ದರವನ್ನೂ ಏರಿಸುವಂತಿಲ್ಲ. ಇದರಿಂದ ಬಸ್ ಮಾಲೀಕರು ನಷ್ಟ ಅನುಭವಿಸುವುದರಿಂದ ಉಡುಪಿಯ ಕೆನರ ಬಸ್ ಮಾಲೀಕರ ಸಂಘ, ಸಿಟಿ ಬಸ್ ಮಾಲೀಕರು ನಾಳೆಯೇ( ಬುಧವಾರ) ಬಸ್ ಓಡಾಟ ಪ್ರಾರಂಭಿಸುವುದು ಕಷ್ಟವೆನ್ನಲಾಗುತ್ತಿದೆ. ಈ ನಡುವೆ ಕರಾವಳಿ ಬಸ್ ಮಾಲಿಕರ ಸಂಘವು ಕೆಲವೊಂದು ಸರ್ವಿಸ್ ಬಸ್ ಓಡಾಟಕ್ಕೆ ನಿರ್ಧಾರಿಸಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಡುಪಿ ಸಿಟಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ಸುರೇಶ್ ಕುಯಿಲಾಡಿ ನಾಯಕ್, ಅರ್ಧದಷ್ಟು ಪ್ರಮಾಣದಲ್ಲಿ ಪ್ರಯಾಣಿಕರನ್ನು ಹಾಕಿಕೊಂಡು, ಹಿಂದಿನ ದರದಲ್ಲೆ ಬಸ್ ಸಂಚಾರ ಆರಂಭಿಸುವುದು ಕಷ್ಟ. ಬಸ್ ಮಾಲಕರಿಗೆ ಇದರಿಂದ ನಷ್ಟವಾಗುತ್ತದೆ. ಎರಡು ಮೂರು ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ತೀರ್ಮನಕ್ಕೆ ಬರುತ್ತೇವೆ.ಆದರೆ ನಾಳೆ ಸಿಟಿ ಬಸ್ ಗಳು ರಸ್ತೆಗಿಳಿಯುವುದಿಲ್ಲ ಎಂದಿದ್ದಾರೆ.


ಇದು ದೇಶಕ್ಕೆ ಬಂದೊದಗಿದ ಆಪತ್ತು , ಪ್ರಸ್ತುತ ಎಲ್ಲಾ ಉದ್ಯಮಗಳು ನಷ್ಟದಲ್ಲಿ ನಡೆಯುತ್ತಿದೆ. ಪ್ರತಿ ಬಾರಿಯೂ ಸಂಸ್ಥೆಯು ಲಾಭದಲ್ಲೇ ಮುನ್ನಡೆಯಬೇಕೆಂದರೆ ಅದು ಕಷ್ಟ ಸಾಧ್ಯ. ಕೆಲವೊಮ್ಮೆ ಸರಕಾರದ ನಿಯಮಗಳೊಂದಿಗೆ ಸಾರ್ವಜನಿಕ ಸೇವೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ್ದು ಬಸ್ ಮಾಲಕರ ಕರ್ತವ್ಯವಾಗಿರುತ್ತದೆಂದು ಬಸ್ ಪ್ರಯಾಣಿಕರು ಹೇಳುತ್ತಿದ್ದಾರೆ.

2 thoughts on “ಈಡೇರದ ಬಸ್ ಮಾಲಕರ ಬೇಡಿಕೆ: ಬುಧವಾರ ಸಿಟಿ ಬಸ್ ರಸ್ತೆಗಿಳಿಯಲ್ಲ

  1. KSRTC buses should run all the Routes of Udupi dist.,and Siddapura, Shankarnarayana,Haladi,Shiriyara,Saibarkatte, Barkur,Brahmavara,Udupi (Ajjarkad) Up and down. Sudheer Kanchan, Shiriyara post, Brahmavara taluk, Udupi District. phone :9845863196. Action from the District administration regarding this is appreciated.

Leave a Reply

Your email address will not be published. Required fields are marked *

error: Content is protected !!