ದೆಹಲಿ ಫಲಿತಾಂಶ: ಆಪ್ 53, ಬಿಜೆಪಿ15, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಮುನ್ನಡೆ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಬಿಗಿ ಬಂದೋಬಸ್ತ್ ನಡುವೆ ಆರಂಭವಾಗಿದೆ. 21 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಸಾಗುತ್ತಿದ್ದು, ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಹಾಲ್ ವೊಂದನ್ನು ನೀಡಲಾಗಿದೆ. 
ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ಸಾಗಲು ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. 

ಮೊದಲಿಗೆ ಅಂಚೆ ಮತಪತ್ರಗಳ ಮತ ಎಣಿಕೆ ನಡೆಯುತ್ತಿದೆ. ನಂತರ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳ ಎಣಿಕೆ ಆರಂಭವಾಗಲಿದ್ದು, 11.30 ಗಂಟೆ ಸಂಪೂರ್ಣ ಚಿತ್ರಣ ದೊರೆಯುವ ಸಾಧ್ಯತೆ ಇದೆ. 

ಪಕ್ಷಗಳುಮುನ್ನಡೆಗೆಲುವುಒಟ್ಟಾರೆ
ಆಪ್530037
ಬಿಜೆಪಿ150011
ಕಾಂಗ್ರೆಸ್020002
ಇತರೆ000000

ರಾಷ್ಟ್ರ ರಾಜಧಾನಿಯ 70 ಸ್ಥಾನಕ್ಕಾಗಿ ಫೆಬ್ರವರಿ 8 ರಂದು ನಡೆದಿದ್ದ ಚುನಾವಣೆಯಲ್ಲಿ  ಶೇ. 67. 5 ರಷ್ಟು ಮತದಾನವಾಗಿತ್ತು.  593 ಪುರುಷರು ಹಾಗೂ 79 ಮಹಿಳೆಯರು ಸೇರಿದಂತೆ ಸುಮಾರು  670 ಅಭ್ಯರ್ಥಿಗಳ  ಅದೃಷ್ಟ ಪರೀಕ್ಷೆ ಇಂದು ನಿರ್ಧಾರವಾಗಲಿದೆ.  

ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಊಹಿಸಿವೆ.

 ಮತ ಎಣಿಕೆ ಹಿನ್ನೆಲೆಯಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಮನೀಶ್ ಸಿಸೊಡಿಯಾ ತಮ್ಮ ಮನೆಯಲ್ಲಿಂದು ವಿಶೇಷ ಪೂಜೆ ನೆರವೇರಿಸಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕಚೇರಿ ಬಳಿ ನೆರೆದಿದ್ದಾರೆ. 

ಮತ್ತೊಂದೆಡೆ ಇಂದು ಬಿಜೆಪಿಗೆ ಒಳ್ಳೇಯ ದಿನವಾಗಲಿದೆ. ನಾವು ಅಧಿಕಾರಕ್ಕೆ ಬರಲಿದ್ದೇವೆ. 55 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಅಚ್ಚರಿ ಪಡಬೇಕಿಲ್ಲ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!